ಕರ್ನಾಟಕ

12 ಅಯಸ್ಕಾಂತೀಯ ಬಟನ್ ನುಂಗಿದ್ದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Pinterest LinkedIn Tumblr


ಬೆಳಗಾವಿ: 12 ಅಯಸ್ಕಾಂತೀಯ ಬಟನ್‌ಗಳನ್ನು ನುಂಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನಿಗೆ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ.

ತೀವ್ರ ಹೊಟ್ಟೆನೋವು ಹಾಗೂ ಕಪ್ಪು ಬಣ್ಣದ ಮಲ ವಿಸರ್ಜನೆ ಮಾಡುತ್ತಿದ್ದ ಗೋವಾ ರಾಜ್ಯದ 2 ವರ್ಷದ ಮಗುವನ್ನು ಪೋಷಕರು ಕೆಎಲ್‌ಇ ಆಸ್ಪತ್ರೆಗೆ ತಂದಿದ್ದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗುವಿನ ಹೊಟ್ಟೆಯ ಎಕ್ಸರೇ ಪರಿಶೀಲಿಸಿದಾಗ ಕೆಲ ವಸ್ತುಗಳು ಗೋಚರಿಸಿದವು. ಮಕ್ಕಳ ತಜ್ಞ ಡಾ.ಸಂತೋಷ ಕುರಬೆಟ್ ಅವರು ಎರಡೂವರೆ ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಬಟನ್ ಗಳನ್ನು ಹೊರ ತೆಗೆದು, 3 ಕಡೆ ಕರುಳನ್ನು ಮರು ಜೋಡಿಸಿದರು. ಒಂದು ವಾರದ ಆರೈಕೆ ಬಳಿಕ ಮಗುವನ್ನು ಮನೆಗೆ ಕಳುಹಿಸಿ ಕೊಡಲಾಗಿದೆ.

ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಸಂತೋಷ ಕುರಬೇಟ್ ಹಾಗೂ ಅವರ ತಂಡದ ಕಾರ್ಯಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments are closed.