ಕರ್ನಾಟಕ

ರಾಜ್ಯದಲ್ಲಿ ಒಂದೇ ದಿನ 34 ಜನರಿಗೆ ಕೊರೊನಾ: 2 ಸಾವು

Pinterest LinkedIn Tumblr

ಬೆಂಗಳೂರು: ಕೊರೋನಾ ಸೋಂಕು ಕರ್ನಾಟಕವನ್ನು ದಿನೇ ದಿನೇ ನಲುಗಿಸುತ್ತಿದ್ದು ಕಳೆದ 24 ಗಂಟೆಯಲ್ಲಿ ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಹೊಸದಾಗಿ 34 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ 595ಕ್ಕೆ ಏರಿಕೆಯಾಗಿದೆ.

ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 959ಕ್ಕೆ ತಲುಪಿದ್ದು, 33 ಜನರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 451 ಮಂದಿ ಗುಣಮುಖರಾಗಿದ್ದಾರೆ.

ಬೀದರ್ 12, ಕಲಬುರಗಿಯಲ್ಲಿ 8, ಹಾಸನ 4, ಬೆಂಗಳೂರು ನಗರ 2, ಉತ್ತರ ಕನ್ನಡ 2, ದಾವಣಗೆರೆ 2, ವಿಜಯಪುರ 2, ದಕ್ಷಿಣ ಕನ್ನಡ 1, ಬಳ್ಳಾರಿಯಲ್ಲಿ 1 ಪ್ರಕರಣಗಳು ವರದಿಯಾಗಿವೆ.

ಇನ್ನು ಇಂದು ಕಲಬುರಗಿಯಲ್ಲಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಕೊರೋನಾಗೆ ಬಲಿಯಾಗಿದ್ದಾರೆ.

ಕೆಲ ಸೋಂಕಿತರ ವಿವರ:
1.ರೋಗಿ-926: ಕಲಬುರಗಿಯ 45 ವರ್ಷದ ಪುರುಷ. ರೋಗಿ-848ರ ಸಂಪರ್ಕದ್ದಲ್ಲಿದ್ದರು.
2.ರೋಗಿ-927: ಕಲಬುರಗಿಯ 60 ವರ್ಷದ ವೃದ್ಧ. ಕಲಬುರಗಿಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
3.ರೋಗಿ-928: ಬೆಂಗಳೂರಿನ 37 ವರ್ಷದ ಮಹಿಳೆ. ಸೋಂಕಿನ ಮೂಲ ಪತ್ತೆಯಾಗಿಲ್ಲ.
4.ರೋಗಿ-929: ಉತ್ತರ ಕನ್ನಡದ 02 ವರ್ಷದ ಬಾಲಕಿ. ರೋಗಿ-786ರ ಸಂಪರ್ಕದಲ್ಲಿದ್ದಳು.
5.ರೋಗಿ-930: ಬಳ್ಳಾರಿಯ 18 ವರ್ಷದ ಯುವತಿ. ತೀವ್ರ ಉಸಿರಾಟದ ತೊಂದರೆ.
6.ರೋಗಿ-931: ಬೀದರ್‌ನ 30 ವರ್ಷದ ಯುವಕ. ಬೀದರ್ ಜಿಲ್ಲೆಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
7.ರೋಗಿ-932: ಬೀದರ್‌ನ 26 ವರ್ಷದ ಯುವತಿ. ಬೀದರ್ ಜಿಲ್ಲೆಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
8.ರೋಗಿ-933: ದಾವಣಗೆರೆಯ 33 ವರ್ಷದ ಮಹಿಳೆ. ರೋಗಿ-695ರ ಸಂಪರ್ಕ ಹೊಂದಿದ್ದರು.

9.ರೋಗಿ-934: ದಾವಣಗೆರೆಯ 11 ವರ್ಷದ ಬಾಲಕ. ರೋಗಿ-695ರ ಸಂಪರ್ಕದಲ್ಲಿ ಇದ್ದರು.
10.ರೋಗಿ-935: ಬೀದರ್‌ನ 19 ವರ್ಷದ ಯುವತಿ. ಬೀದರ್ ಜಿಲ್ಲೆಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
11. ರೋಗಿ-936: ಬೀದರ್‌ನ 36 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
12. ರೋಗಿ-937: ಬೀದರ್‌ನ 17 ವರ್ಷದ ಬಾಲಕ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
13. ರೋಗಿ-938: ಬೀದರ್‌ನ 36 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
14. ರೋಗಿ-939: ಬೀದರ್‌ನ 31 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
15. ರೋಗಿ-940: ಬೀದರ್‌ನ 15 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
16. ರೋಗಿ-941: ಬೀದರ್‌ನ 16 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
17. ರೋಗಿ-942: ಬೀದರ್‌ನ 14 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.

18. ರೋಗಿ-943:ಬೀದರ್‌ನ 35 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
19. ರೋಗಿ-944: ವಿಜಯಪುರದ 30 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
20. ರೋಗಿ-945: ವಿಜಯಪುರದ 18 ವರ್ಷದ ಯುವಕ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
21. ರೋಗಿ-946: ಉತ್ತರ ಕನ್ನಡದ 26 ವರ್ಷದ ಯುವಕ. ಮಹಾರಾಷ್ಟ್ರದ ರತ್ನಗಿರಿಗೆ ಪ್ರಯಾಣ ಮಾಡಿರುವ ಹಿನ್ನೆಲೆ.
22. ರೋಗಿ-947: ದಕ್ಷಿಣ ಕನ್ನಡದ 38 ವರ್ಷದ ಮಹಿಳೆ. ರೋಗಿ-507 ಸಂಪರ್ಕ.
23. ರೋಗಿ-948: ಹಾಸನದ 38 ವರ್ಷದ ಮಹಿಳೆ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
24. ರೋಗಿ-949: ಹಾಸನದ 17 ವರ್ಷದ ಯುವಕ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
25. ರೋಗಿ-950: ಹಾಸನದ 14 ವರ್ಷದ ಬಾಲಕಿ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
26. ರೋಗಿ-951: ಹಾಸನದ 43 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.

Comments are closed.