ಕರ್ನಾಟಕ

ಕೊರೊನಾಗೆ ವಿರುದ್ಧ ಹೋರಾಡಲು ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್‌ ಕಷಾಯ ಬಿಡುಗಡೆ

Pinterest LinkedIn Tumblr


ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯವನ್ನು ರಾಜ್ಯ ಆಯುಷ್‌ ಇಲಾಖೆ ಬಿಡುಗಡೆ ಮಾಡಿದೆ. ಸಚಿವ ಎಸ್‌.ಸುರೇಶ್‌ ಕುಮಾರ್‌ ಇದನ್ನು ಬಿಡುಗಡೆ ಮಾಡಿದರು.

ಕೇಂದ್ರ ಮಾರ್ಗಸೂಚಿ ಅನುಸಾರ ಕಷಾಯ ಸಿದ್ಧಪಡಿಸಲಾಗಿದೆ. ಇದನ್ನು ಉಚಿತವಾಗಿ ನೀಡಲಾಗುವುದು. ಕ್ವಾರಂಟೈನ್‌ನಲ್ಲಿ ಇರುವವರಿಗೆ ಆದ್ಯತೆ ಎಂದು ರಾಜ್ಯದ ಆಯುಷ್‌ ಇಲಾಖೆ ನಿರ್ದೇಶಕಿ ಮೀನಾಕ್ಷಿ ನೇಗಿ ತಿಳಿಸಿದ್ದಾರೆ.

ಜೋಶಾಂದ ಎನ್ನುವುದು ಕಷಾಯದ ಹೆಸರು. ಹಾಗೆಯೇ ಅರ್ಕ್ ಎ ಅಜೀಬ್‌ ಎನ್ನುವ ಪದಾರ್ಥವನ್ನು ಇಲಾಖೆ ಸಿದ್ಧಪಡಿಸಿದೆ. ಈ ದ್ರಾವಣವನ್ನು ಟಿಶ್ಯೂ ಪೇಪರ್‌ ಅಥವಾ ಕರ್ಚೀಪ್‌ಗೆ ಹಾಕಿಕೊಂಡು ಆಗಾಗ ಅದರ ಸುವಾಸನೆ ತೆಗೆದುಕೊಳ್ಳಬೇಕು. ಈ ದ್ರಾವಣವನ್ನು ಬಿಸಿ ನೀರಿಗೆ ಹಾಕಿ ಅದರ ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳಬೇಕು. ಈ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಎಂದು ಸಚಿವ ಸುರೇಶ್‌ ಕುಮಾರ್‌ ವಿವರ ನೀಡಿದರು.

ಕಾರ್ಮಿಕರ ಹಿತರಕ್ಷಣೆಗೆ ನಿರ್ದೇಶನ

ವಲಸೆ ಕಾರ್ಮಿಕರು ರಸ್ತೆ, ರೈಲ್ವೆ ಹಳಿಯ ಮೇಲೆ ಸಂಚರಿಸಿದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಹಾಗೆ ಸಂಚಾರ ಮಾಡುವುದು ಕಂಡು ಬಂದರೆ ಅಂಥವರನ್ನು ತಾತ್ಕಾಲಿಕ ವಸತಿ ಕೇಂದ್ರಕ್ಕೆ ಕರೆದೊಯ್ದು ಊಟ, ಉಪಹಾರದ ವ್ಯವಸ್ಥೆ ಮಾಡಬೇಕು. ನಂತರ ವಿಶೇಷ ಶ್ರಮಿಕ್‌ ರೈಲು ಅಥವಾ ಬಸ್‌ನಲ್ಲಿಅವರ ಊರಿಗೆ ತೆರಳುವ ವ್ಯವಸ್ಥೆ ಮಾಡುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದೆ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು

Comments are closed.