ಕರ್ನಾಟಕ

ರೆಡ್ ಜೋನ್​ನಲ್ಲಿ ರಾಜ್ಯದ 15 ಜಿಲ್ಲೆಗಳು: ಇಲ್ಲಿ 3ನೇ ಹಂತದ ಲಾಕ್ ಡೌನ್ ಯಾವುದೇ ಸಡಿಲಿಕೆ ಇಲ್ಲ

Pinterest LinkedIn Tumblr


ಬೆಂಗಳೂರು(ಮೇ 01): ಎರಡನೇ ಲಾಕ್ ಡೌನ್ ಇದೇ ಭಾನುವಾರಕ್ಕೆ ಅಂತ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಸೋಂಕಿನ ತೀವ್ರತೆ ಆಧಾರದ ಮೇಲೆ ಪ್ರದೇಶವಾರು ಲಾಕ್ ಡೌನ್ ಸಡಿಲಿಕೆ ಆಗುವ ಸಾಧ್ಯತೆ ಇದೆ. ರೆಡ್ ಜೋನ್ ಇರುವ ಪ್ರದೇಶಗಳಲ್ಲಿ ಬಹುತೇಕ ಲಾಕ್ ಡೌನ್ ಮುಂದುವರಿಯಲಿದೆ. ಕೇಂದ್ರ ಸರ್ಕಾರ ಹಸಿರು, ಕಿತ್ತಳೆ ಮತ್ತು ಕೆಂಪು ಎಂಬ 3 ಪಟ್ಟಿ ಮಾಡಿದ್ದು, ದೇಶಾದ್ಯಂತ 733 ಜಿಲ್ಲೆಗಳನ್ನ ಈ 3 ಪಟ್ಟಿಗೆ ವಿಭಜಿಸಿದೆ. ಕರ್ನಾಟಕದ ಬೆಂಗಳೂರು, ಬೆಂ. ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ರೆಡ್ ಜೋನ್ ಪಟ್ಟಿಯಲ್ಲಿವೆ. ಇದೇ ವೇಳೆ, ರಾಜ್ಯ ಸರ್ಕಾರ ಕೂಡ ತನ್ನದೇ ಕೆಂಪು ಪಟ್ಟಿ ಮಾಡಿದೆ.

ಬೆಂಗಳೂರು ನಗರದ ಜೊತೆ, ಮೈಸೂರು, ಕಲಬುರ್ಗಿ, ವಿಜಯಪುರ ಸೇರಿದಂತೆ ಒಟ್ಟು 15 ಜಿಲ್ಲೆಗಳು ಕೆಂಪು ಪಟ್ಟಿಯಲ್ಲಿವೆ. ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸೋಂಕು ಇರುವ ಪ್ರದೇಶಗಳನ್ನು ಗುರುತಿಸಿ ಪ್ರತ್ಯೇಕ ಕೆಂಪು ಪಟ್ಟಿ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಇಂಥ 15 ವಾರ್ಡ್​ಗಳನ್ನು ಗುರುತಿಸಿ ರೆಡ್ ಜೋನ್​ಗೆ ಹಾಕಲಾಗಿದೆ. ಇಲ್ಲಿ ಅತೀ ಹೆಚ್ಚು ನಿಗಾ ವಹಿಸುವ ಸಾಧ್ಯತೆ ಇದೆ.

ರೆಡ್ ಜೋನ್ ಜಿಲ್ಲೆಗಳು:
ಬೆಂಗಳೂರು ನಗರ, ಮೈಸೂರು, ಬೆಳಗಾವಿ, ಕಲ್ಬುರ್ಗಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ಬೀದರ್, ದಕ್ಷಿಣ ಕನ್ನಡ, ಬಳ್ಳಾರಿ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ತುಮಕೂರು, ದಾವಣಗೆರೆ.

ಬೆಂಗಳೂರು ನಗರದ ರೆಡ್ ಜೋನ್ ವಾರ್ಡ್​ಗಳು:
37-ಯಶವಂತಪುರ, 84-ಹಗದೂರು, 93-ವಸಂತನಗರ, 119- ಧರ್ಮರಾಯಸ್ವಾಮಿ ದೇವಸ್ಥಾನ, 133 – ಹಂಪಿನಗರ, 134- ಬಾಪೂಜಿನಗರ, 135- ಪಾದರಾಯನಪುರ, 136- ಜಗಜೀವನರಾಮನಗರ, 139- ಕೆ ಆರ್ ಮಾರ್ಕೆಟ್, 140- ಚಾಮರಾಜಪೇಟೆ, 145- ಹೊಂಬೇಗೌಡನಗರ, 158- ದೀಪಾಂಜಲಿನಗರ, 170- ಜಯನಗರ ಪೂರ್ವ, 189- ಹೊಂಗಸಂದ್ರ.ಹೊಂಗಸಂದ್ರ ಮತ್ತು ಪಾದರಾಯನಪುರ ಬೆಂಗಳೂರಿನ ಪ್ರಮುಖ ಹಾಟ್ ಸ್ಪಾಟ್ ಎನಿಸಿವೆ. ಪಾದರಾಯನಪುರದ ಸಮೀಪವೇ ಇರುವ ಜಗಜೀವನರಾಮನಗರ, ಚಾಮರಾಜಪೇಟೆ, ದೀಪಾಂಜಲಿ ನಗರಕ್ಕೂ ಸೋಂಕು ವ್ಯಾಪಿಸಿರುವುದು ಪತ್ತೆಯಾಗಿದೆ. ಹೀಗೆ, ನಗರದ ವಿವಿಧೆಡೆ ಹೆಚ್ಚಿನ ಕೊರೋನಾ ಪ್ರಕರಣಗಳು ಪತ್ತೆಯಾಗಿರುವುದನ್ನು ಗಮನಿಸಿ ಅಂಥವನ್ನು ರೆಡ್ ಜೋನ್ ಪಟ್ಟಿಗೆ ಸೇರಿಸಲಾಗಿದೆ.

Comments are closed.