ಕರ್ನಾಟಕ

ರಾಜ್ಯದಲ್ಲಿ ಕೊರೋನಾದ 24 ಹೊಸ ಪ್ರಕರಣಗಳು ಪತ್ತೆ

Pinterest LinkedIn Tumblr


ಬೆಂಗಳೂರು(ಮೇ 01): ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಒಟ್ಟು 24 ಹೊಸ ಕೊರೋನಾ ಸೋಂಕು ಪ್ರಕರಣ ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 589ಕ್ಕೆ ಏರಿದೆ. ಮಂಡ್ಯ ಮತ್ತು ದಾವಣಗೆರೆಯಲ್ಲೇ ಇವತ್ತು ಹೆಚ್ಚು ಹೊಸ ಕೇಸ್​ಗಳು ಬೆಳಕಿಗೆ ಬಂದಿರುವುದು. ಅದೃಷ್ಟಕ್ಕೆ ಇವತ್ತು ಯಾವುದೇ ಸಾವು ಆಗಿಲ್ಲ. ಸಾವಿನ ಸಂಖ್ಯೆ 22ರಲ್ಲೇ ಮುಂದುವರಿದಿದೆ. ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಹೆಲ್ತ್ ಬುಲೆಟಿನ್​ನಲ್ಲಿ ಈ ಮಾಹಿತಿ ಇದೆ.

ಈ 24 ಗಂಟೆಯಲ್ಲಿ ಬೆಳಕಿಗೆ ಬಂದ 24 ಪ್ರಕರಣಗಳಲ್ಲಿ ಮಂಡ್ಯ 8, ದಾವಣಗೆರೆ 6, ಬೆಳಗಾವಿ 3, ದಕ್ಷಿಣ ಕನ್ನಡ 2, ವಿಜಯಪುರ 1, ಚಿಕ್ಕಬಳ್ಳಾಪುರ 1, ಕಲ್ಬುರ್ಗಿ 2 ಮತ್ತು ಹುಬ್ಬಳ್ಳಿ-ಧಾರವಾಡ 1 ಪ್ರಕರಣಗಳಿವೆ.

ಮಂಡ್ಯದಲ್ಲಿ ಇಷ್ಟೊಂದು ಪ್ರಕರಣಗಳ ಏರಿಕೆಯಾಗಲು ಮುಂಬೈನಿಂದ ಬಂದ ವ್ಯಕ್ತಿಗಳೇ ಕಾರಣವಾಗಿದ್ದಾರೆ. ಪಿ-566, ಪಿ-567 ಮತ್ತು ಪಿ-568 ಅವರು ಮುಂಬೈನಿಂದ ಬಂದಿದ್ದು, ಇವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇವರ ಸಂಪರ್ಕಕ್ಕೆ ಬಂದ ಕೆಆರ್ ಪೇಟೆಯ ಒಬ್ಬ ಮಹಿಳೆಗೂ ಸೋಂಕು ಇರುವುದು ಖಚಿತವಾಗಿದೆ. ಇನ್ನು, ಮಳವಳ್ಳಿಯಲ್ಲಿ ಪಿ-179 ರೋಗಿಯ ಸಂಪರ್ಕಕದಿಂದಾಗಿ ನಾಲ್ವರಿಗೆ ಸೋಂಕು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ. ಇವರೆಲ್ಲರನ್ನೂ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿಡಲಾಗಿದೆ. ಮಂಡ್ಯದ ಈ ಎಂಟು ಸೋಂಕಿತರು 12-30 ವಯೋಮಾನದವರೇ ಆಗಿದ್ಧಾರೆ. ದಾವಣೆಗೆರೆಯಲ್ಲಿ ಪಿ-556 ರೋಗಿಯಿಂದ ಐವರಿಗೆ ಸೋಂಕು ತಗುಲಿದೆ.

ಇಲ್ಲಿಯವರೆಗೆ 589 ಪಾಸಿಟಿವ್ ಕೇಸ್​ಗಳು ದಾಖಲಾಗಿವೆ. ಅವರಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ. 251 ಮಂದಿ ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದಾರೆ. ಇನ್ನುಳಿದಿರುವ 315 ಆ್ಯಕ್ಟಿವ್ ಕೇಸ್​ಗಳಲ್ಲಿ 9 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 306 ರೋಗಿಗಳ ಆರೋಗ್ಯ ಸ್ಥಿತಿ ನಿಯಂತ್ರಣದಲ್ಲಿದೆ.

389 ಪ್ರಕರಣಗಳ ಜಿಲ್ಲಾವಾರು ಪಟ್ಟಿ:ಬೆಂಗಳೂರು ನಗರ: 141
ಮೈಸೂರು: 88
ಬೆಳಗಾವಿ: 70
ಕಲಬುರ್ಗಿ: 55
ವಿಜಯಪುರ: 44
ಬಾಗಲಕೋಟೆ: 29
ಮಂಡ್ಯ: 26
ಚಿಕ್ಕಬಳ್ಳಾಪುರ: 19
ದಕ್ಷಿಣ ಕನ್ನಡ: 18
ಬೀದರ್: 14
ಬಳ್ಳಾರಿ: 13
ಉತ್ತರ ಕನ್ನಡ: 11
ಧಾರವಾಡ: 10
ದಾವಣಗೆರೆ: 10
ಬೆಂಗಳೂರು ಗ್ರಾಮಾಂತರ: 6
ಗದಗ: 5
ತುಮಕೂರು: 5
ಉಡುಪಿ: 3
ಚಿತ್ರದುರ್ಗ: 1
ಕೊಡಗು: 1
ಇತರೆ: 20

ಪಾದರಾಯನಪುರ, ಹೊಂಗಸಂದ್ರದಲ್ಲಿ ನೆಗಟಿವ್:
ಬೆಂಗಳೂರಿಗರಿಗೆ ತುಸು ನಿರಾಳತೆ ತರುವ ವಿಷಯವೆಂದರೆ ಕೊರೋನಾ ಹಾಟ್​ಸ್ಪಾಟ್ ಎನಿಸಿರುವ ಪಾದರಾಯನಪುರ ಮತ್ತು ಹೊಂಗಸಂದ್ರದ ಸೋಂಕು ಶಂಕಿತರ ಪರೀಕ್ಷಾ ವರದಿಗಳೆಲ್ಲವೂ ನೆಗಟಿವ್ ಬಂದಿದೆ. ಪಾದರಾಯನಪುರದ 26 ಮಂದಿ ಹಾಗೂ ಹೊಂಗಸಂದ್ರದ 35 ಮಂದಿಯ ಸ್ವಾಬ್ ಟೆಸ್ಟ್ ನೆಗಟಿವ್ ರಿಸಲ್ಟ್ ಬಂದಿದೆ. ಬಿಬಿಎಂಪಿಯ ಆರೋಗ್ಯಾಧಿಕಾರಿ ವಿಜಯೇಂದ್ರ ಈ ಮಾಹಿತಿ ನೀಡಿದ್ದಾರೆ.

Comments are closed.