ಕರ್ನಾಟಕ

ರಾಜ್ಯದಲ್ಲಿ ಕೊರೋನಾಗೆ ಇಬ್ಬರು ಬಲಿ: ಮೃತರ ಸಂಖ್ಯೆ 16ಕ್ಕೇ ಏರಿಕೆ

Pinterest LinkedIn Tumblr


ಬೆಂಗಳೂರು(ಏ.19): ಕರ್ನಾಟಕದಲ್ಲಿ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಇಂದು ಒಂದೇ ದಿನ 6 ಹೊಸ ಕೋವಿಡ್​​-19 ಪಾಸಿಟಿವ್​​ ಪ್ರಕರಗಳು ಪತ್ತೆಯಾಗಿವೆ. ಜತೆಗೆ ಕಳೆದ 24 ಗಂಟೆಗಳಲ್ಲಿ ಇಬ್ಬರು ಸಾವನ್ನಪ್ಪಿದ ಪರಿಣಾಮ ಸಾವಿನ ಸಂಖ್ಯೆ 16ಕ್ಕೆ ಏರಿದೆ. ಇದುವರೆಗೂ ರಾಜ್ಯಾದ್ಯಂತ 390 ಮಂದಿಗೆ ಕೊರೋನಾ ಸೋಂಕು ಇರುವುದು ಧೃಡವಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್​​​ ಬುಲೆಟಿನ್​​ ಬಿಡುಗಡೆ ಮಾಡಿದೆ.

ಇನ್ನು, ಮಹಿಳೆ 65 ವರ್ಷದ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಿವಾಸಿಯಾದ 50 ವರ್ಷದ ಮಹಿಳೆಯೊಬ್ಬರು ಕೊರೋನಾ ಸೋಂಕಿನಿಂದ ಬಲಿಯಾಗಿದ್ದಾರೆ. ಈ ಇಬ್ಬರಿಗೂ ಸಾರಿ ಇತ್ತು, ಆದರಿಂದಲೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೀಗ ಕೊನೆಗೂ ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರದ ಪ್ರಕಾರ, ಬೆಂಗಳೂರು ನಗರ- 89, ಮೈಸೂರು- 84, ಬೆಳಗಾವಿ- 42, ಬಾಗಲಕೋಟೆ- 21, ಬಳ್ಳಾರಿ- 13, ಬೆಂಗಳೂರು ಗ್ರಾಮಾಂತರ- 12, ಬೀದರ್​​- 14, ಚಿಕ್ಕಬಳ್ಳಾಪುರ- 16, ದಕ್ಷಿಣ ಕನ್ನಡ- 14, ಚಿತ್ರದುರ್ಗ- 1, ದಾವಣಗೆರೆ- 2, ಧಾರವಾಡ- 7, ಗದಗ- 3, ಕಲಬುರ್ಗಿ- 22, ಕೊಡಗು- 1, ಮಂಡ್ಯ- 12, ತುಮಕೂರು- 2, ಉಡುಪಿ- 3, ಉತ್ತರ ಕನ್ನಡ- 11, ವಿಜಯಪುರ 21 ಮಂದಿಗೆ ಕೊರೋನಾ ಬಂದಿದೆ. ಈ ಪೈಕಿ 111 ಮಂದಿ ಸಂಪೂರ್ಣ ಗುಣಮುಖರಾಗಿದ್ದು, 263 ಕೇಸುಗಳು ಆ್ಯಕ್ಟೀವ್​​ ಆಗಿವೆ.

ಭಾರತದಲ್ಲಿ ಕೊರೋನಾ ವೈರಸ್​ ದಾಳಿಗೆ ಜನರು ತತ್ತರಿಸಿದ್ದಾರೆ. ದೇಶದ ಇದುವರೆಗಿನ ಸೋಂಕಿತರ ಪ್ರಮಾಣ ಹೆಚ್ಚಾಗಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಕೊರೋನಾದಿಂದ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ದೇಶದಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ 507ಕ್ಕೆ ಏರಿಕೆಯಾಗಿದೆ. ಕೊರೋನಾ ಸೋಂಕಿತರ ಸಂಖ್ಯೆ 15,707ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅವರಲ್ಲಿ 2230 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Comments are closed.