ಕರ್ನಾಟಕ

ದಯವಿಟ್ಟು ಶಿವಮೊಗ್ಗಕ್ಕೆ ಬರಬೇಡಿ…! ಪ್ರವಾಸಿಗರಿಗೆ ಮನವಿ

Pinterest LinkedIn Tumblr


ಶಿವಮೊಗ್ಗ: ದಯವಿಟ್ಟು ಶಿವಮೊಗ್ಗಕ್ಕೆ ಬರಬೇಡಿ..! ರಾಜ್ಯ, ಹೊರ ರಾಜ್ಯದ ಪ್ರವಾಸಿಗರಿಗೆ ಶಿವಮೊಗ್ಗದ ಜನರ ಮನವಿ ಇದು.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ನಿರ್ಬಂಧ ಹೇರಿದೆ. ಈ ನಡುವೆ ಬೆಂಗಳೂರು ಸೇರಿದಂತೆ ವಿವಿಧೆಡೆಯ ಪ್ರವಾಸಿಗರು ಶಿವಮೊಗ್ಗದತ್ತ ಮುಖ ಮಾಡುತ್ತಿದ್ದಾರೆ. ರಜೆ ಇರುವುದರಿಂದ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಮುಂದಾಗಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೂರಿಸ್ಟ್‌ಗಳೇ ಶಿವಮೊಗ್ಗಕ್ಕೆ ಬರಬೇಡಿ ಅನ್ನುವ ಮನವಿಗಳು ಕಾಣಸಿಗುತ್ತಿವೆ.

ಹುಲಿ, ಸಿಂಹಧಾಮ ಬಂದ್‌: ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣ ಹುಲಿ ಮತ್ತು ಸಿಂಹಧಾಮವನ್ನು ಬಂದ್‌ ಮಾಡಲಾಗಿದೆ. ಮಾ. 15 ರಿಂದ 23ರವರೆಗೆ ಹುಲಿ, ಸಿಂಹಧಾಮ ಬಂದ್‌ ಮಾಡಲಾಗುತ್ತಿದೆ ಎಂದು ಸಫಾರಿಯ ಕಾರ್ಯಕಾರಿ ನಿರ್ವಾಹಕ ಮುಕುಂದ್‌ ಚಂದ್ರ ತಿಳಿಸಿದ್ದಾರೆ.

ಶಾಲೆ- ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳ ಆಗಬಹುದು. ಹೊರ ಜಿಲ್ಲೆ, ರಾಜ್ಯದಿಂದಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ರಾಜ್ಯ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದರೆ ಸಮಸ್ಯೆಯಾಗಲಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮವನ್ನು ಬಂದ್‌ ಮಾಡಲಾಗುತ್ತದೆ ಎಂದು ಮುಕುಂದ್‌ ಚಂದ್ರ ತಿಳಿಸಿದ್ದಾರೆ.

Comments are closed.