ಕರ್ನಾಟಕ

ಪ್ರಥಮ ರಾತ್ರಿಗೂ ಮೊದಲೇ ಗಂಡನ ಮೊಬೈಲ್‍ಗೆ ಬಂತು ಮಡದಿಯ ಸೆಕ್ಸ್ ವಿಡಿಯೋ

Pinterest LinkedIn Tumblr


ಬೆಂಗಳೂರು: ಫ‌ಸ್ಟ್‌ನೈಟ್‌ಗೆ ಎರಡು ದಿನ ಇರುವಾಗಲೇ ಪತಿಯ ಮೊಬೈಲಿಗೆ ಪತ್ನಿಯ ಸೆಕ್ಸ್ ವಿಡಿಯೋ ಹಾಗೂ ಫೋಟೋಗಳು ಬಂದಿದೆ. ಇದನ್ನು ನೋಡಿದ ಆಘಾತಕ್ಕೊಳಗಾದ ಪತಿ ತನ್ನ ಪತ್ನಿ ಹಾಗೂ ಕುಟುಂಬಸ್ಥರ ವಿರುದ್ಧ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಹಾಸನ ಜಿಲ್ಲೆಯ ನಿವಾಸಿಯಾಗಿರುವ ಮಹಿಳೆ ಚಿಕ್ಕಮಗಳೂರಿನ ನ್ಯಾಯಾಲಯವೊಂದರಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾಳೆ. 2019 ಜೂನ್ 30ರಂದು ಮಹಿಳೆಯ ಕುಟುಂಬಸ್ಥರು 1.25 ಲಕ್ಷ ರೂ. ಖರ್ಚು ಮಾಡಿ ಮಗಳ ನಿಶ್ಚಿತಾರ್ಥವನ್ನು ನಿರಂಜನ್(ಹೆಸರು ಬದಲಾಯಿಸಲಾಗಿದೆ) ಜೊತೆ ಮಾಡಿದ್ದರು. ನಿಶ್ಚಿತಾರ್ಥ ಆಗಿ ಆರು ತಿಂಗಳ ಬಳಿಕ ಅಂದರೆ ನವೆಂಬರ್ 24ರಂದು ಇಬ್ಬರು ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ಮಹಿಳೆ 10 ದಿನ ಮಾತ್ರ ತನ್ನ ಪತಿಯ ಜೊತೆ ಸುಬ್ರಹ್ಮಣ್ಯನಗರದಲ್ಲಿರುವ ಮನೆಯಲ್ಲಿದ್ದಳು.

ದೂರಿನಲ್ಲಿ ಏನಿದೆ?
ತಿಪಟೂರಿನಲ್ಲಿ ಡಿ. 12ರಂದು ಬೀಗರೂಟವನ್ನು ಆಯೋಜಿಸಿದ್ವಿ. ಬೀಗರೂಟ ತಿಪಟೂರಿನಲ್ಲಿದ್ದ ಕಾರಣ ನಾನು ನನ್ನ ಪತ್ನಿಯನ್ನು ಆಕೆಯ ಮನೆಯಲ್ಲಿಯೇ ಬಿಟ್ಟಿದ್ದೆ. ಈ ನಡುವೆ ಡಿ. 15ರಂದು ನಮ್ಮ ಮೊದಲರಾತ್ರಿ ನಿಗದಿಯಾಗಿತ್ತು. ಫ‌ಸ್ಟ್‌ನೈಟ್‌ಗೆ ಎರಡು ದಿನ ಇರುವಾಗ ಪ್ರಮೋದ್ ಕುಮಾರ್ ಎಂಬವನು ನನ್ನ ಫೇಸ್‍ಬುಕ್ ಮೆಸೆಂಜರ್ ಗೆ ನನ್ನ ಪತ್ನಿಯ ನಗ್ನ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದನು. ಅಲ್ಲದೆ ಹೆಚ್ಚಿನ ಮಾಹಿತಿ ಬೇಕು ಎಂದರೆ ಈ ನಂಬರಿಗೆ ಕರೆ ಮಾಡು ಎಂದು ಮೊಬೈಲ್ ಸಂಖ್ಯೆ ಕೂಡ ಕಳುಹಿಸಿದ್ದನು.

ಪ್ರಮೋದ್ ಕಳುಹಿಸಿದ ಮೊಬೈಲ್ ನಂಬರ್ ಗೆ ನಾನು ಕರೆ ಮಾಡಿದೆ. ಈ ವೇಳೆ ವಿಜಯ್‍ಕುಮಾರ್ (ಹೆಸರು ಬದಲಾಯಿಸಲಾಗಿದೆ) ಕರೆ ಸ್ವೀಕರಿಸಿದ್ದನು. ನಾನು ಆತನಿಗೆ ಫೋಟೋ ಹಾಗೂ ವಿಡಿಯೋ ಬಗ್ಗೆ ವಿಚಾರಿಸಿದೆ. ಆಗ ವಿಜಯ್‍ಕುಮಾರ್, ನಾನು ಹಾಗೂ ನಿನ್ನ ಪತ್ನಿ 7 ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಅಲ್ಲದೆ ನಿಮ್ಮ ನಿಶ್ಚಿತಾರ್ಥವಾದ ಬಳಿಕ ನಾವಿಬ್ಬರು ದೈಹಿಕ ಸಂಪರ್ಕ ಹೊಂದಿದ್ದೇವು. ಅದೇ ಫೋಟೋ ಹಾಗೂ ವಿಡಿಯೋಗಳು ಈಗ ನಿನಗೆ ಸಿಕ್ಕಿರುವುದು ಎಂದು ಹೇಳಿದ್ದಾನೆ.

ಇದೇ ವೇಳೆ ವಿಜಯ್‍ಕುಮಾರ್, ಮಹಿಳೆ ಜೊತೆಗೆ ಚಾಟಿಂಗ್ ಮಾಡಿರುವ ಮೆಸೇಜ್‍ಗಳನ್ನು ಸ್ಕ್ರೀನ್‍ಶಾಟ್ ತೆಗೆದು ನಿರಂಜನ್‍ಗೆ ಕಳುಹಿಸಿದ್ದಾನೆ. ಮೆಸೇಜ್‍ನಲ್ಲಿ ಮಹಿಳೆ, ನನ್ನ ಮನೆಯವರಿಗೆ ನಿರಂಜನ್ ಬೇಕು. ಆದರೆ ನನಗೆ ನೀನು ಬೇಕು. ನಾನು ಯಾವುದೇ ಕಾರಣಕ್ಕೂ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೋಗುವುದಿಲ್ಲ ಎಂದು ಹೇಳಿದ್ದಾಳೆ. ಇದರಿಂದ ಮಾನಸಿಕವಾಗಿ ನೊಂದ ನಿರಂಜನ್ ಹಾಗೂ ಆತನ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿಜಯ್‍ಕುಮಾರ್ ಹಾಗೂ ಮಹಿಳೆಯನ್ನು ವಿಚಾರಣೆ ನಡೆಸಿದಾಗ ಆಗ ಇಬ್ಬರು ತಮ್ಮ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ.

ನನ್ನ ಪೋಷಕರು ಐಡಿಎಫ್‍ಸಿ ಬ್ಯಾಂಕ್ ಹಾಗೂ ಸಂಬಂಧಿಕರಿಂದ ಸಾಲ ಪಡೆದು ಬರೋಬ್ಬರು ಏಳೂವರೆ ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದರು. ಈ ಘಟನೆ ಆದ ನಂತರ ನನ್ನ ಪತ್ನಿಯ ಚಿಕ್ಕಪ್ಪ ನನಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನನ್ನ ಪತ್ನಿ ಕೂಡ ನಿಮ್ಮ ಹೆಸರು ಬರೆದಿಟ್ಟು ನಿಮಗೂ ಹಾಗೂ ನಿಮ್ಮ ಕುಟುಂಬಸ್ಥರಿಗೂ ಪಾಠ ಕಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾಳೆ ಎಂದು ನಿರಂಜನ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

Comments are closed.