ಕರ್ನಾಟಕ

ರಾಜ್ಯದಲ್ಲಿ ಕೊರೊನಾ ಕಳವಳ: ಕಾಲೇಜು, ಪಾಲಿಟೆಕ್ನಿಕ್ ತರಗತಿಗಳಿಗೆ 15 ದಿನ ರಜೆ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಎಲ್ಲಾ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಪಾಲಿಟೆಕ್ನಿಕ್ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಮಾರ್ಚ್ 14ರಿಂದ ಹದಿನೈದು ದಿನಗಳ ಕಾಲ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.

ಇನ್ನು ಈ ಅವಧಿಯಲ್ಲಿ ಯಾವುದೇ ಪರೀಕ್ಷೆಗಳು ನಿಗದಿಯಾಗಿದ್ದಲ್ಲಿ ಅದನ್ನು ಮುಂದೂಡಿ ಬೇರೆ ದಿನಾಂಕದಂದು ಮತ್ತೆ ನಡೆಸುವಂತೆಯೂ ಈ ಅದೇಶದಲ್ಲಿ ತಿಳಿಸಲಾಗಿದೆ. ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಪರವಾಗಿ ಈ ಅದೇಶವನ್ನು ಇಂದು ಹೊರಡಿಸಿದ್ದಾರೆ.

Comments are closed.