ಕರ್ನಾಟಕ

ಹೆತ್ತ ತಾಯಿಯ ಸಹಾಯದಿಂದಲೇ ಅತ್ಯಾಚಾರ: 14ರ ಬಾಲಕಿ ಗರ್ಭಿಣಿ

Pinterest LinkedIn Tumblr


ಬೆಂಗಳೂರು: ಹೆತ್ತ ತಾಯಿಯ ಸಹಾಯದಿಂದಲೇ ಬಾಲಕಿ ಮೇಲೆ ದರೋಡೆಕೋರನೊಬ್ಬ ಅತ್ಯಾಚಾರವೆಸಗಿದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

14 ವರ್ಷದ ಬಾಲಕಿಯನ್ನು ದರೋಡೆಕೋರ ವಿನಯ್(22) ನಿರಂತರವಾಗಿ ರೇಪ್ ಮಾಡಿದ ಪರಿಣಾಮ ಇದೀಗ ಆಕೆ 8 ತಿಂಗಳ ಗರ್ಭಿಣಿಯಾಗಿದ್ದಾಳೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ, ಎಲ್ಲಾ ಆಯಾಮಗಳಲ್ಲೂ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?:
ಒಂದು ದಿನ ಬಾಲಕಿ ತನ್ನ ತಾಯಿ ಬಳಿ ಆರೋಗ್ಯ ಸರಿ ಇಲ್ಲ, ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾಳೆ. ಆದರೆ ಮಗಳ ಮಾತಿಗೆ ತಾಯಿ ಕ್ಯಾರೇ ಎಂದಿಲ್ಲ. ಅಲ್ಲದೆ ಆಸ್ಪತ್ರೆಗೂ ಕರೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಇದೀಗ ಬಾಲಕಿ 8 ತಿಂಗಳ ಗರ್ಭಿಣಿಯಾಗಿದ್ದಾಳೆ. ತಾಯಿಯ ನಡತೆಯಿಂದ ಬೇಸರಗೊಂಡ ಬಾಲಕಿ ತನ್ನ ಅಜ್ಜಿ ಮನೆಗೆ ತೆರಳಿದ್ದು, ಅಜ್ಜಿ ಬಾಲಕಿಯನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಬಾಲಕಿ ಮಾಗಡಿ ಉಪ-ವಿಭಾಗ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿ ಹಾಗೂ ತಾಯಿ ವಿರುದ್ಧ ದೂರು ನೀಡಿದ್ದಾಳೆ.

ತಾಯಿ ಮಾಡಿದ್ದ ನೀಚ ಕೃತ್ಯವೇನು..?:
ಬಾಲಕಿ ತಾಯಿ, ದರೋಡೆಕೋರ ವಿನಯ್‍ನನ್ನು ಬೆಂಗಳೂರು ದಕ್ಷಿಣದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಬಂದಿದ್ದಾಳೆ. ನಂತರ ಬಾಲಕಿಯನ್ನು ಆತನ ಜೊತೆ ಮಲಗುವಂತೆ ಒತ್ತಾಯ ಮಾಡಿದ್ದಾಳೆ. ಅಲ್ಲದೆ ವಿನಯ್ ನಿನ್ನನ್ನು ಮದುವೆಯಾಗುತ್ತಾನೆ ಎಂದು ಕೂಡ ಹೇಳಿ ಬಾಲಕಿಯನ್ನು ಒಪ್ಪಿಸಿದ್ದಾಳೆ. ಕೆಲ ದಿನಗಳ ನಂತರ ಬಾಲಕಿಯ ಪಿರಿಯೆಡ್(ತಿಂಗಳ ಸಮಸ್ಯೆ) ನಲ್ಲಿ ಬದಲಾವಣೆ ಕಂಡುಬಂತು. ಅಲ್ಲದೆ ಆಕೆಯ ಆರೋಗ್ಯದಲ್ಲಿಯೂ ವ್ಯತ್ಯಾಸ ಕಂಡು ಬಂತು. ಇದರಿಂದ ಗಾಬರಿಗೊಂಡ ಬಾಲಕಿ, ತನ್ನ ತಾಯಿ ಬಳಿ ಆರೋಗ್ಯದ ಬಗ್ಗೆ ಹೇಳಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾಳೆ. ಆದರೆ ಪಾಪಿ ತಾಯಿ ಕೆಲವೊಂದು ಮೆಡಿಸಿನ್ ತೆಗೆದುಕೊಳ್ಳುವಂತೆ ಹೇಳಿದ್ದೇ ವಿನಃ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ.

ಕೊನೆಗೆ ಬಾಲಕಿ ತನ್ನ ಕಷ್ಟವನ್ನು ಅಜ್ಜಿ ಬಳಿ ಹೇಳಿಕೊಂಡಿದ್ದಾಳೆ. ಕೂಡಲೇ ಅಜ್ಜಿ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಬಾಲಕಿಯನ್ನು ಪರೀಕ್ಷಿಸಿ ಆಕೆ ಗರ್ಭಿಣಿಯಾಗಿದ್ದು, 8 ತಿಂಗಳು ಆಗಿದೆ ಎಂದು ತಿಳಿಸಿದ್ದಾರೆ. ವೈದ್ಯರ ಮಾತು ಕೇಳುತ್ತಿದ್ದಂತೆಯೇ ಅಜ್ಜಿ ಶಾಕ್‍ಗೆ ಒಳಗಾಗಿದ್ದಾರೆ.

ಬಾಲಕಿ 7ನೇ ತರಗತಿ ಓದುತ್ತಿದ್ದು, ತಾಯಿ ತನ್ನ ಗಂಡನನ್ನು ತೊರೆದು 10 ವರ್ಷಗಳಿಂದ ಬೇರೆಯೇ ವಾಸ ಮಾಡುತ್ತಿದ್ದಾಳೆ. ತಾಯಿ ಜೊತೆ ಬಾಲಕಿ ಕೂಡ ವಾಸಿಸುತ್ತಿದ್ದಳು. ಕಲ್ಯಾಣ ಮಂಟಪ ಹಾಲ್ ನಲ್ಲಿ ತಾಯಿ ಕೆಲಸ ಮಾಡುತ್ತಿದ್ದು, ಕಳೆದ 1 ವರ್ಷದಿಂದ ಈಕೆಗೆ ವಿನಯ್ ಪರಿಚಯವಾಗಿದೆ. ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ವಿನಯ್ ಗೆ ಆಗಾಗ ದರೋಡೆ ಮಾಡುವ ಹವ್ಯಾಸ ಕೂಡ ಇತ್ತು.

ತನ್ನ ತಾಯಿ ಹಾಗೂ ವಿನಯ್ ಇಬ್ಬರೂ ಮನೆಗೆ ಕುಡಿದು ಬರುತ್ತಿದ್ದರು. ಆ ನಂತರ ತಾಯಿ ವಿನಯ್ ಜೊತೆ ಮಲಗುವಂತೆ ಒತ್ತಾಯ ಮಾಡುತ್ತಿದ್ದಳು. ಅಲ್ಲದೆ ತಾಯಿ, ಊಟದಲ್ಲಿ ಮತ್ತು ಬರುವ ಪದಾರ್ಥ ಹಾಕಿ ಕೊಡುತ್ತಿದ್ದಳು ಎಂದು ಬಾಲಕಿ ಪೊಲೀಸರ ಬಳಿ ಹೇಳಿದ್ದಾಳೆ. ಕಳೆದ ಒಂದು ವರ್ಷಗಳಿಂದ ವಿನಯ್ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದನು. ಯಾವಾಗ ಬಾಲಕಿಯ ಪೀರಿಯೆಡ್ ನಿಂತಿದೆ ಎಂದು ತಿಳಿಯಿತೋ ಆವತ್ತಿನಿಂದ ಆತನ ಮನೆಗೆ ಬರುವುದನ್ನು ನಿಲ್ಲಿಸಿದ್ದನು. ಸದ್ಯ ದರೋಡೆ ಪ್ರಕರಣ ಸಂಬಂಧ ಆರೋಪಿ ವಿನಯ್ ನನ್ನು ಸಿಟಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಕೈ-ಕಾಲು ಮುರಿದುಕೊಂಡಿರೋ ತಾಯಿ:
ಬಾಲಕಿಯ ತಾಯಿ ಕೆಲ ತಿಂಗಳ ಹಿಂದೆಯಷ್ಟೇ ಮೆಟ್ಟಿಲಿನಿಂದ ಬಿದ್ದು, ಕಾಲು ಹಾಗೂ ಕೈಗೆ ಗಂಭೀರ ಗಾಯಗಳಾಗಿದ್ದು, ನಡೆದಾಡಲು ಕಷ್ಟವಾಗುತ್ತಿದೆ. ಹೀಗಾಗಿ ಆಕೆಯನ್ನು ಬಂಧಿಸಲು ಸಾಧ್ಯವಾಗಿಲ್ಲ. ಆದರೆ ಆಕೆ ಗುಣಮುಖಳಾದ ಬಳಿಕ ಬಂಧಿಸುತ್ತೇವೆ. ಆರೋಪಿ ಹಾಗೂ ಬಾಲಕಿಯ ತಾಯಿ ನಡುವೆ ಇರುವ ಸಂಬಂಧದ ಬಗ್ಗೆ ನಮಗೆ ಇನ್ನೂ ನಿಖರ ಮಾಹಿತಿ ತಿಳಿದಿಲ್ಲ. ಹೀಗಾಗಿ ವಿನಯ್ ಸಂಪೂರ್ಣ ತನಿಖೆಯ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.