ಕರ್ನಾಟಕ

ಕೊರೊನಾ ವೈರಸ್‌ ತಡೆಗೆ ಆಯುರ್ವೇದ ಮತ್ತು ಹೋಮಿಯೋ ಪತಿ ಔಷಧ

Pinterest LinkedIn Tumblr


ಬೆಂಗಳೂರು: ಕೊರೊನಾ ವೈರಸ್‌ ತಡೆಗೆ ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಕಟ್ಟೆಚ್ಚರ ವಹಿಸಿವೆ. ಈ ಮಧ್ಯೆ ರೋಗ ಬಾರದಂತೆ ತಡೆಯಲು ಭಾರತೀಯ ಆಯುಷ್‌ ಇಲಾಖೆ ಕೆಲವು ಆಯುರ್ವೇದ ಮತ್ತು ಹೋಮಿಯೋ ಪತಿ ಔಷಧಗಳನ್ನು ಪಟ್ಟಿ ಮಾಡಿದೆ.

ಕೇರಳದಲ್ಲಿ 806 ಮಂದಿ ಮೇಲೆ ನಿಗಾ ಇರಿಸಿದ್ದು, ಇವರಲ್ಲಿ 173 ಮಂದಿ ಚೀನದಿಂದ ಬುಧವಾರವಷ್ಟೇ ವಾಪಸ್‌ ಆಗಿದ್ದಾರೆ. 10 ಮಂದಿಯನ್ನು ಐಸಿಯುವಿನಲ್ಲಿಟ್ಟು ಪರಿಶೀಲಿಸಲಾಗುತ್ತಿದೆ. ಮಣಿಪುರ, ಗೋವಾ, ಮಧ್ಯ ಪ್ರದೇಶಗಳಲ್ಲಿ ಕೆಲವರಲ್ಲಿ ಈ ವೈರಸ್‌ ಸೋಂಕು ಕಾಣಿಸಿದ್ದು, ತೀವ್ರ ನಿಗಾ ಇರಿಸಲಾಗಿದೆ. ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿಯಲ್ಲಿಯೂ ಶಂಕಿತರ ಮೇಲೆ ನಿಗಾ ಇರಿಸಲಾಗಿದೆ.

ಸಹಾಯವಾಣಿ
ಕೇಂದ್ರ ಆರೋಗ್ಯ ಇಲಾಖೆಯಿಂದ 24ಗಿ7 ಸಹಾಯವಾಣಿ ಆರಂಭ. ಸಂಖ್ಯೆ: 011-23978046ಗೆ ಕರೆ ಮಾಡಿ ಯಾವುದೇ ರೀತಿಯ ಅನುಮಾನಗಳಿದ್ದರೂ ಕೇಳಬಹುದು.

21 ವಿಮಾನ ನಿಲ್ದಾಣ
ಈವರೆಗೆ ದೇಶದ 7 ವಿಮಾನ ನಿಲ್ದಾಣಗಳಲ್ಲಿ ಮಾತ್ರ ಕೊರೊನಾ ವೈರಸ್‌ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಇತ್ತು. ಇದನ್ನು 21 ವಿಮಾನ ನಿಲ್ದಾಣ ಗಳಿಗೆ ಸರಕಾರ ಏರಿಕೆ ಮಾಡಿದೆ.

ಬೆಂಗಳೂರಿನಲ್ಲೂ ಲ್ಯಾಬ್‌ ಇದುವರೆಗೆ ಪುಣೆಯಲ್ಲಿ ಮಾತ್ರ ಕೊರೊನಾ ವೈರಸ್‌ ಮಾದರಿ ಪರೀಕ್ಷೆ ವ್ಯವಸ್ಥೆ ಇತ್ತು. ಇಂಥ ವ್ಯವಸ್ಥೆ ಬೆಂಗಳೂರು, ಅಲ್ಲೆಪಲ್ಲಿ, ಹೈದರಾಬಾದ್‌ ಮತ್ತು ಮುಂಬಯಿಯಲ್ಲೂ ತೆರೆಯಲಾಗಿದೆ.

ಆಯುಷ್‌ ಔಷಧ
1. ಶದಂಗ್‌ ನೀರು (ಮುಸ್ತಾ, ಪಪೆìಟ್‌, ಉಷೀರ್‌, ಚಂದನ ಮತ್ತು ನಗರ್‌ ಮಿಶ್ರಣ) ಇದರ 10 ಗ್ರಾಂ ಪುಡಿಯನ್ನು ಒಂದು ಲೀ. ನೀರಿನಲ್ಲಿ ಹಾಕಿ ಅರ್ಧಕ್ಕೆ ಇಳಿಯುವಷ್ಟು ಕುದಿಸಿ ಕುಡಿಯಬೇಕು.

2. ಆಯುರ್ವೇದ ಪದ್ಧತಿಯಲ್ಲಿರುವ ರೋಗ ನಿರೋ ಧಕ ಕ್ರಮಗಳನ್ನು ಪಾಲನೆ ಮಾಡಬೇಕು.

3. ಆರೋಗ್ಯಕರ ಊಟ/ಜೀವನಶೈಲಿ ರೂಢಿಸಿ ಕೊಳ್ಳಬೇಕು.

4. 5 ಗ್ರಾಂಗಳಷ್ಟು ಅಗಸ್ತ್ಯಾ ಹರಿತ್ಯಾಕಿಯನ್ನು ಬಿಸಿ ನೀರಿ ನಲ್ಲಿ ಹಾಕಿ ದಿನಕ್ಕೆರಡು ಬಾರಿ ಕುಡಿಯಬೇಕು.

5. 500 ಎಂಜಿಯಷ್ಟು ಸಂಶಾಮನಿ ವಾಟಿಯನ್ನು ದಿನಕ್ಕೆರಡು ಬಾರಿ ಸೇವಿಸಬೇಕು.

6. ತ್ರಿಕಟು (ಪಿಪ್ಪಾಲಿ, ಮರೀಚ್‌ ಮತ್ತು ಶುಂಠಿಯ ಮಿಶ್ರಣ) 5 ಗ್ರಾಂ ಮತ್ತು 3-5 ತುಳಸಿ ಎಲೆಗಳನ್ನು ಒಂದು ಲೀಟರ್‌ ನೀರಿನಲ್ಲಿ ಹಾಕಿ ಅರ್ಧದಷ್ಟು ಬರುವವರೆಗೆ ಕುದಿಸಿ ಬಾಟಲ್‌ನಲ್ಲಿ ಹಾಕಿ ಬಾಯಾರಿಕೆ ಆದಾಗಲೆಲ್ಲ ಕುಡಿಯಬೇಕು.

7. ಪ್ರತಿಮರ್ಸಾ ನಶ್ಯಾ: ಅನು ತೈಲ/ಸಾಸಿವೆ ಎಣ್ಣೆ ಯನ್ನು ದಿನ ಬೆಳಗ್ಗೆ ಮೂಗಿನ ಹೊಳ್ಳೆಗಳಿಗೆ ಹಾಕಿಕೊಳ್ಳಬೇಕು.

ಹೋಮಿಯೋಪತಿ
ಹೋಮಿಯೋಪತಿ ತಜ್ಞರು ಹೇಳಿರುವಂತೆ ಅರ್ಸೆ ನಿಕಮ್‌ ಆಲ್ಬಂ 30 ಔಷಧದ ಒಂದು ಡೋಸ್‌ ಅನ್ನು ಸೋಂಕು ನಿವಾರಕವಾಗಿ ನೀಡಬಹುದು.

ಯುನಾನಿ
ಬೇಹಿದಾನ 3 ಗ್ರಾಂ, ಉನ್ನಾಬ್‌ ಜಿಜಿಪಸ್‌ ಐದು, ಸಪಿಸ್ತಾನ್‌ ಏಳು ಅನ್ನು 1 ಲೀಟರ್‌ ನೀರಿನಲ್ಲಿ ಅರ್ಧದಷ್ಟು ಆಗುವವರೆಗೆ ಕುದಿಸಬೇಕು. ಇದನ್ನು ಬಾಟಲ್‌ನಲ್ಲಿ ಹಾಕಿ ಅಗತ್ಯವಿರುವಾಗ ಕುಡಿಯಬೇಕು.
ರೋಗನಿರೋಧಕ ವ್ಯವಸ್ಥೆ ಗಟ್ಟಿಗೊಳ್ಳುವ ಸಲುವಾಗಿ ಖಮೀರಾ ಮರ್ವಾರೀದ್‌ 3-5 ಗ್ರಾಂ ಅನ್ನು ದಿನಕ್ಕೊಮ್ಮೆ ಸೇವಿಸಬೇಕು.

Comments are closed.