ಕರ್ನಾಟಕ

ಮಾತು ಬಾರದ ಮೂಗ ಬಾಲಕ ಗಣರಾಜ್ಯೋತ್ಸವದ ಭಾಷಣ ಮಾಡಿದ!

Pinterest LinkedIn Tumblr


ಹಾವೇರಿ: ಇವತ್ತು ಗಣರಾಜ್ಯೋತ್ಸವ ದಿನ. ಆತನ ಸ್ನೇಹಿತರು ಭಾಷಣ ಮಾಡಿದ್ದಾರೆ. ಆದರೆ ದೇಶಾಭಿಮಾನ ಅನ್ನೋದು ಎಲ್ಲರಲ್ಲೂ ಇರುತ್ತೆ ಅಲ್ವಾ ಆದ್ದರಿಂದ ಮಾತು ಬಾರದ ಮೂಗ ಬಾಲಕ 71ನೇ ಗಣರಾಜ್ಯೋತ್ಸವದಲ್ಲಿ ನಾನೂ ಭಾಷಣ ಮಾಡುತ್ತೇನೆಂದು ಹಠ ಹಿಡಿದು ಭಾಷಣ ಮಾಡಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರೋ ಪವನಕುಮಾರ ಅಂಗಡಿ ತನ್ನದೆ ಭಾಷೆಯಲ್ಲಿ ಭಾಷಣ ಮಾಡಿದ್ದಾನೆ. ಮೂಗ ಬಾಲಕನ ಭಾಷಣ ನೋಡಿದ ಶಿಕ್ಷಕರು ಹಾಗೂ ಗ್ರಾಮಸ್ಥರು ಬೆರಗಾಗಿದ್ದಾರೆ. ವೇದಿಕೆ ಮೇಲೆ ಕುಳಿತವರು ಸಾಕು ಅಂದರೂ ನಿಲ್ಲಿಸದೆ ಭಾಷಣ ಮಾಡಿ ಕೊನೆಯಲ್ಲಿ ಸೆಲ್ಯೂಟ್ ಮಾಡಿ ಪವನಕುಮಾರ ಭಾಷಣ ಮುಗಿಸಿದ್ದಾನೆ.

ಈ ಬಾಲಕನ ಭಾಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಭಾಷಣ ಮುಗಿಯುತ್ತಿದ್ದ ಸಭೆಯಲ್ಲಿ ಕುಳಿತ ಗಣ್ಯರು ಹಾಗೂ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಭಾಷಣದ ವಿಡಿಯೋಗೆ ಬಹಳ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments are closed.