ಕರ್ನಾಟಕ

ವಿಭಿನ್ನವಾದ ಪೊಲೀಸ್ ಪೇದೆ ಸಹೋದರನ ವೆಡ್ಡಿಂಗ್ ಕಾರ್ಡ್‌!

Pinterest LinkedIn Tumblr


ಕೊಪ್ಪಳ: ಸಾಮಾನ್ಯವಾಗಿ ಮದುವೆಯಾಗೋ ವಧು-ವರರು, ನಮ್ಮ ಮದುವೆಯ ಆಮಂತ್ರಣ ಪತ್ರಿಕೆ ತುಂಬಾ ಗ್ರ್ಯಾಂಡ್ ಆಗಿರಬೇಕು. ನಮ್ಮ ಪೊಟೋಗಳು, ಹೆಸರುಗಳು ಫುಲ್ ಮಿಂಚ್ತಾ ಇರಬೇಕು ಅಂತಾ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ.

ಆದ್ರೆ ಪೊಲೀಸ್ ಪೇದೆಯೊಬ್ಬ, ತಮ್ಮ ಸಹೋದರನ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸೈಬರ್ ಕ್ರೈಂ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾನೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ, ಗಂಗಾಧರ ನಾಯಕ, ಇಂಥದ್ದೊಂದು ಜಾಗೃತಿ ಕಾರ್ಯಕ್ಕೆ ಕೈ ಹಾಕಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಇದೇ ಜನವರಿ 26 ರಂದು ಗಂಗಾಧರನ ಸಹೋದರನ ಮದುವೆ ಇದ್ದು, ಆಮಂತ್ರಣ ಪತ್ರಿಕೆ ತುಂಬಾ ಜನಜಾಗೃತಿ ಮೂಡಿಸುವ ಸೈಬರ್ ಕ್ರೈಂ ಅಪರಾಧಗಳ ಬಗ್ಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುತ್ತಿದ್ದಾನೆ. ಅಲ್ಲದೇ ಮದುವೆಯಂದು ಇಡೀ ಕಲ್ಯಾಣಮಂಟಪವನ್ನು ಕೆಸರಿ, ಬಿಳಿ, ಹಸರಿನಿಂದ ಸಿಂಗಾರ ಮಾಡಲಿದ್ದು, ದೇಶ ಪ್ರೇಮವನ್ನು ಹೆಚ್ಚಿಸೋ ಉದ್ದೇಶ ಗಂಗಾಧರದ್ದಾಗಿದೆ.

Comments are closed.