ಕರ್ನಾಟಕ

ನಿಖಿಲ್ ಕುಮಾರಸ್ವಾಮಿ ಮನಗೆದ್ದ ಹುಡುಗಿ ಯಾರು ಗೊತ್ತೆ?

Pinterest LinkedIn Tumblr


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಪುತ್ರ, ನಟ ಮತ್ತು ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಮದುವೆಗೆ ತಯಾರಿ ಆರಂಭವಾಗಿದ್ದು, ಹೆಚ್‌.ಡಿ.ಕೆ ಕುಟುಂಬ ಸದ್ದಿಲ್ಲದೆ ನಿಖಿಲ್‌ ಮದುವೆ ಮಾತುಕತೆ ನಡೆಸುತ್ತಿರುವುದಲ್ಲದೆ, ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದೆ.

ವಿಜಯನಗರ ಶಾಸಕ ಲೇಔಟ್‌ ಕೃಷ್ಣಪ್ಪ ಅವರ ಸೋದರ ಸಂಬಂಧಿ ಮಂಜುನಾಥ್‌ ಎನ್ನುವರ ಪ್ರಥಮ ಪುತ್ರಿ ಎಂಸಿಎ ಪದವಿಧರೆ ರೇವತಿ ಜೊತೆ ನಿಖಿಲ್‌ ಭಾನುವಾರ ನಿಖಿಲ್‌ ನಿಶ್ಚಿತಾರ್ಥ ನೆರವೇರಿದೆ. ಮಲ್ಲತ್ತಹಳ್ಳಿಯಲ್ಲಿರುವ ರೇವತಿ ಮನೆಯಲ್ಲಿ ಸರಳವಾಗಿ ಮತ್ತು ಗೌಪ್ಯವಾಗಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನಿಖಿಲ್‌, ಹೆಚ್‌.ಡಿ ದೇವೇಗೌಡ, ಪತ್ನಿ ಚೆನ್ನಮ್ಮ, ಹೆಚ್‌.ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಮತ್ತು ಹೆಚ್‌.ಡಿ.ಕೆ ಸಹೋದರಿಯರಾದ ಅನಸೂಯ ಮತ್ತು ಶೈಲಜಾ ಮಾತ್ರ ಸಮಾರಂಭದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಮೂಲಗಳ ಪ್ರಕಾರ, ಸದ್ಯ ಸರಳವಾಗಿ ಮತ್ತು ಆಪ್ತ ವಲಯವನ್ನಷ್ಟೇ ಆಹ್ವಾನಿಸಿ ನಿಶ್ಚಿತಾರ್ಥ ಮಾಡಿ ಮುಗಿಸಿರುವ ಕುಮಾರಸ್ವಾಮಿ ಕುಟುಂಬ, ನಿಖಿಲ್‌ ಮತ್ತು ರೇವತಿ ಮದುವೆಯನ್ನು ಏಪ್ರಿಲ್‌ 29 ಮತ್ತು 30 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಸಲು ಯೋಚಿಸಿದೆ ಎನ್ನಲಾಗಿದೆ. ಕಳೆದ ಕೆಲ ತಿಂಗಳಿನಿಂದ ಮದುವೆ ವಿಚಾರವಾಗಿ ನಿಖಿಲ್‌ ಕುಮಾರಸ್ವಾಮಿ ಸಾಕಷ್ಟು ಸುದ್ದಿಯಲ್ಲಿದ್ದರು. ಸದ್ಯ ನಿಖಿಲ್‌ ಕೈಯಲ್ಲಿ ನಾಲ್ಕು ಸಿನಿಮಾಗಳಿದ್ದು, ಒಂದರ ಹಿಂದೊಂದರಂತೆ ಆರಂಭವಾಗಲಿವೆ.

Comments are closed.