ಕರ್ನಾಟಕ

ಯುವತಿಗಾಗಿ ಇಬ್ಬರು ಭಗ್ನ ಪ್ರೇಮಿಗಳ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

Pinterest LinkedIn Tumblr


ಶಿವಮೊಗ್ಗ: ಯುವತಿಯ ವಿಚಾರದಲ್ಲಿ ಇಬ್ಬರು ಭಗ್ನ ಪ್ರೇಮಿಗಳ ನಡುವಿನ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ನಗರದ ನ್ಯೂ ಮಂಡ್ಲಿ ಬಡಾವಣೆಯಲ್ಲಿ ನಡೆದಿದೆ.

ನಗರದ ಇಲಿಯಾಸ್ ಬಡಾವಣೆ ನಿವಾಸಿಗಳು. ಮೊಹಮ್ಮದ್ ಅಲಿ ಕೊಲೆಯಾದ ಯುವಕ. ಅದೇ ಬಡಾವಣೆಯ ತೌಸಿಫ್ ಕೊಲೆ ಮಾಡಿದ ಆರೋಪಿ. ಮೊಹಮ್ಮದ್ ಅಲಿ ಹಾಗೂ ತೌಸಿಫ್ ಪ್ರೀತಿಸುತ್ತಿದ್ದ ಯುವತಿ ಸಹ ಅದೇ ಬಡಾವಣೆ ನಿವಾಸಿಯಾಗಿದ್ದಾಳೆ.
ಆರೋಪಿ ತೌಸಿಫ್

ಮೊಹಮ್ಮದ್ ಆಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಆರೋಪಿ ತೌಸಿಫ್ ಟೋಯಿಂಗ್ ವಾಹನ ಚಾಲಕನಾಗಿದ್ದ. ಇಬ್ಬರೂ ಒಬ್ಬಳನ್ನೇ ಪ್ರೀತಿಸುತ್ತಿದ್ದರು. ಭಾನುವಾರ ಸಂಜೆ ಇದೇ ವಿಷಯಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಆರೋಪಿ ತೌಸಿಫ್ ಮೊಹಮ್ಮದ್ ಅಲಿಗೆ ಚಾಕು ಇರಿದು ಪರಾರಿಯಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಮೊಹಮ್ಮದ್ ಅಲಿ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಮೊಹಮ್ಮದ್ ಅಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಪೇಟೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪರಾರಿಯಾಗಿರುವ ಆರೋಪಿ ತೌಸಿಫ್ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Comments are closed.