ಮನೋರಂಜನೆ

ಮೋದಿ ಟ್ವೀಟ್ ಕಾಪಿ ಮಾಡಿ ಬಾಲಿವುಡ್ ನಟಿ ಊರ್ವಶಿ ರೌಥೆಲಾ ಟ್ರೋಲ್

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ಕಾಪಿ ಮಾಡಿ ಐರಾವತ ಸಿನಿಮಾದ ನಟಿ ಊರ್ವಶಿ ರೌಥೆಲಾ ಟ್ರೋಲ್‍ಗೆ ಒಳಗಾಗಿದ್ದಾರೆ.

ಶಬಾನಾ ಅಜ್ಮಿ ಅವರು ಶನಿವಾರ ಸಂಜೆ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಈ ವಿಚಾರ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ‘ಅಪಘಾತದಲ್ಲಿ ಶಬಾನಾ ಅಜ್ಮಿ ಜಿ ಗಾಯಗೊಂಡ ಸುದ್ದಿ ದುಃಖ ತಂದಿದೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರ ಟ್ವೀಟ್ ಅನ್ನು ಊರ್ವಶಿ ರೌಥೆಲಾ ಯಥಾವತ್ತಾಗಿ ನಕಲು ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಊರ್ವಶಿ ರೌಥೆಲಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ನೀವ್ಯಾಕೆ ಮೋದಿ ಅವರ ಟ್ವೀಟ್ ಅನ್ನು ಕಾಪಿ, ಪೇಸ್ಟ್ ಮಾಡಿದ್ರಿ. ಸುಮ್ಮನೆ ರಿಟ್ವೀಟ್ ಮಾಡಬಹುದಿತ್ತು ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ ಟ್ವೀಟ್ ಕಾಪಿ, ಪೇಸ್ಟ್ ಮಾಡುವುದು ಅಪರಾಧವಲ್ಲ ಬಿಡಿ. ಕಾಪಿ ಪೇಸ್ಟ್ ಸೂಪರ್ ಎಂದು ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

Comments are closed.