ಕರ್ನಾಟಕ

ಪೆಟ್ರೋಲ್‌ ಮತ್ತು ಡೀಸೆಲ್​​ ದರದಲ್ಲಿ ಏರಿಕೆ; ದರ ಎಷ್ಟು ಗೊತ್ತಾ…?

Pinterest LinkedIn Tumblr

ಬೆಂಗಳೂರು: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ದಾಖಲೆಯ ಮಟ್ಟ ತಲುಪುವ ಸಾಧ್ಯತೆ ಇದೆ. ಕಳೆದೊಂದು ವಾರದಿಂದ ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಪೆಟ್ರೋಲ್​​​-ಡೀಸೆಲ್​​ ದರವೂ ಏರಿಕೆಯಾಗುತ್ತಿದೆ. ಇಂದು ಕೂಡ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್​​ ದರದಲ್ಲಿ ಪ್ರತಿ ಲೀಟರ್​​ಗೆ 05-10 ಪೈಸೆ ಹೆಚ್ಚಳವಾಗಿದೆ.

ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್​​ ಪೆಟ್ರೋಲ್​​ ಬೆಲೆ 75.74 ರೂ., ಡೀಸೆಲ್ ಬೆಲೆ ಲೀಟರ್​​ಗೆ 68.79 ರೂ. ಆಗಿದೆ ಎನ್ನಲಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್​​ ಲೀಟರ್​ ದರ 78.28 ರೂ., ಡೀಸೆಲ್​​ಗೆ 71.08 ರೂ. ಇದೆ. ಹಾಗೆಯೇ ಮುಂಬೈನಲ್ಲಿ ಲೀಟರ್​​ ಪೆಟ್ರೋಲ್​​ಗೆ 81.33 ರೂ. ಮತ್ತು ಡೀಸೆಲ್​​ಗೆ 72.14 ರೂ. ಇದೆ. ಚೆನ್ನೈ ಪೆಟ್ರೋಲ್​ಗೆ 78.69 ರೂ., ಡೀಸೆಲ್​ ದರವೂ 72.69 ರೂ. ಕಡಿಮೆಯಾಗಿದೆ. ಅಂತೆಯೇ ಹೈದರಾಬಾದ್​ನಲ್ಲೂ ಪೆಟ್ರೋಲ್​​​ಗೆ ಲೀಟರ್​​ ಬೆಲೆ 80.54 ರೂ., ಡೀಸೆಲ್​​ ಬೆಲೆ 75.00 ರೂ. ಆಗಿದೆ.

ಇನ್ನು ಪೆಟ್ರೋಲ್​​-ಡಿಸೇಲ್​​ ಬೆಲೆ ಏರುಗತಿ ಗಮನಿಸಿದರೆ ಶೀಘ್ರದಲ್ಲೇ ಒಂದು ಲೀಟರ್​​​ ಬೆಲೆ 80 ರೂ. ದಾಟುವುದರಲ್ಲಿ ಅಚ್ಚರಿಯಿಲ್ಲ. ಕಳೆದ 10 ದಿನಗಳಲ್ಲಿ 2 ದಿನ ಯಥಾಸ್ಥಿತಿ ಕಂಡುಕೊಂಡಿದ್ದು ಬಿಟ್ಟರೆ ಒಂದು ದಿನವು ಇಳಿಕೆಯಾಗಿಲ್ಲ. 8 ಪೈಸೆಯಿಂದ 17 ಪೈಸೆವರೆಗೆ ಹೆಚ್ಚಳವಾಗಿದೆ. ಒಟ್ಟಾರೆ 10 ದಿನಗಳಲ್ಲಿ 92 ಪೈಸೆ ಏರಿಯಾಗಿದೆ. ಡಿಸೆಂಬರ್‌ 28ರಂದು ಪೆಟ್ರೋಲ್‌ ದರ 77.30 ರೂ. ಇತ್ತು.

ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ತೈಲ ಮತ್ತು ಚಿನ್ನದ ಬೆಲೆಗಳು ಗಗನಕ್ಕೇರುತ್ತಿವೆ. ಷೇರುಪೇಟೆ ತಲ್ಲಣಗೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಕೂಡ ದುಬಾರಿಯಾಗಲಿದೆ. ಭಾರತದ ಮಾರುಕಟ್ಟೆಯ ಮೇಲೂ ನಿರೀಕ್ಷೆಯಂತೆ ಹೊಡೆತ ಬಿದ್ದಿದೆ.

ಈಗ ಜಾಗತಿಕ ತೈಲ ಬೆಲೆಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇನ್ನಷ್ಟು ತುಟ್ಟಿಯಾಗಲಿವೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಒಂದು ಲೀಟರ್ ಪೆಟ್ರೋಲ್ ಬೆಲೆ 78.28 ರೂ ಇದೆ. ಸದ್ಯದಲ್ಲೇ ಇದು 80 ರೂಪಾಯಿ ಮಟ್ಟ ಮುಟ್ಟುವ ಸಾಧ್ಯತೆ ಇದೆ.

Comments are closed.