ಕರ್ನಾಟಕ

ಜವಾಹರ‌ಲಾಲ್ ನೆಹರು, ಮನಮೋಹನ್ ಸಿಂಗ್ ಸಿಎಎ ಪರ ಮಾತನಾಡಿದ್ದಾರೆ: ಚಂದ್ರಶೇಖರ ಕಂಬಾರ

Pinterest LinkedIn Tumblr


ಬೆಂಗಳೂರು: ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಜವಾಹರ‌ಲಾಲ್ ನೆಹರು ಸಿಎಎ ಪರವಾದ ನಿಲುವು ಹೊಂದಿದ್ದರು. ಈ ಬಗ್ಗೆ ಮನಮೋಹನ್ ಸಿಂಗ್ ಮಾತನಾಡಿದ್ರು ಈ ಬಗ್ಗೆ ಎಲ್ಲರೂ ಚಿಂತಿಸಬೇಕಾದ ಅವಶ್ಯಕತೆಯಿದೆ. ಇವರು ಕಾಯ್ದೆ ಜಾರಿ ಮಾಡಿರೋದರಿಂದ ಇಷ್ಟೊಂದು ಮಹತ್ವ ಬಂದಿದೆ ಎಂದು ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.

ಇಂದು ಬಿಜೆಪಿ ಹಮ್ಮಿಕೊಂಡಿದ್ದ ಸಿಎಎ ಬಗ್ಗೆ ಮನೆ ಮನೆ ಸಂಪರ್ಕ ಅಭಿಯಾನದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಪಾಲ್ಗೊಂಡಿದ್ದರು. ಕತ್ರಿಗುಪ್ಪೆಯ ಕಂಬಾರರ ನಿವಾಸಕ್ಕೆ ಭೇಟಿ ನೀಡಿ, ಸಿಎಎ ಕಾಯ್ದೆ ಬಗ್ಗೆ ಹೇಳಿದರು. ಇದನ್ನ ರಾಜಕೀಯಕ್ಕೋಸ್ಕರ ಕೆಲವರು ವಿರೋಧಿಸುತ್ತಿದ್ದಾರೆ. ಇಂತಹ ಕಾಯ್ದೆಯ ಬಗ್ಗೆ ಮನೆ ಮನೆಗೆ ತಿಳಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಡಿಸಿಎಂ ತಿಳಿಸಿದರು.

ಕಂಬಾರರ ಮನೆಯಷ್ಟೇ ಅಲ್ಲದೇ, ನಟಿ ಗಿರಿಜಾ ಲೋಕೇಶ್, ಪ್ರದೇಶ್ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಸೇರಿದಂತೆ ಹತ್ತಾರು ಮನೆಗಳಿಗೆ ತೆರಳಿ, ಸಿಎಎ ಕಾಯ್ದೆ ಜಾರಿಯ ಬಗ್ಗೆ ಹೇಳಿದರು.

Comments are closed.