ಕರ್ನಾಟಕ

ಬ್ರಾಹ್ಮಣರ ವೇಷಧಾರಿಯಾಗಿ ಕಳ್ಳತನಕ್ಕೆ ಯತ್ನಿಸಿದ್ದವ ಸಿಕ್ಕಿಬಿದ್ದ!

Pinterest LinkedIn Tumblr


ಮೈಸೂರು: ಬ್ರಾಹ್ಮಣರ ವೇಷ ಧರಿಸಿ ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನಿಸಿದ ಘಟನೆ ರಾಮಾನುಜ ರಸ್ತೆಯಲ್ಲಿ ನಡೆದಿದೆ.

ಕೃತ್ಯವೆಸಗಿದವನನ್ನು ಪ್ರಶಾಂತ ಎಂದು ಗುರುತಿಸಲಾಗಿದ್ದು, ಈ ಹಿಂದೆಯೂ ಇದೇ ರೀತಿ ನಾಲ್ಕು ಬಾರಿ ಕಳ್ಳತನ ನಡೆಸಿದ್ದಾಗಿ ಆತನೇ ಒಪ್ಪಿಕೊಂಡಿದ್ದಾನೆ.
ಸಾರ್ವಜನಿಕರು ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದು, ಈತ ಕಳೆದ 15 ದಿನದಿಂದ ಮತ್ತೆ ಕಳ್ಳತನಕ್ಕೆ ಸರಿಯಾಗಿ ಪ್ಲಾನ್ ಮಾಡಿದ್ದ. ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಕಳ್ಳನನ್ನು ಕೆ.ಆರ್.ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಹಿಂದೆ ಮನೆಯವರನ್ನು ಪರಿಚಯಿಸಿಕೊಂಡು ನಾನು ದೇಗುಲಕ್ಕೆ ಡೊನೇಶನ್ ಕೊಡುತ್ತೇನೆ ಎಂದು ನಂಬಿಸಿ ನೀರು ಕೇಳುವ ನೆಪದಲ್ಲಿ ಅವರ ಮನೆಯ ದುಡ್ಡು ಹಾಗೂ ಕೀಯನ್ನು ಲಪಟಾಯಿಸಿ ಪರಾರಿಯಾಗಿದ್ದ..

ಇದಾದ ಬಳಿಕ ಆತನೇ ಪೊಲೀಸರು ಮಾತನಾಡುವಂತೆ ಮನೆಯವರನ್ನು ಠಾಣೆಗೆ ಬನ್ನಿ ಎಂದು ಕರೆಸಲು ಸಂಚು ಹೂಡಿ ಆ ವೇಳೆ ಮನೆಗೆ ಕನ್ನ ಹಾಕಬೇಕೆಂದು ಕೊಂಡಿದ್ದ. ಆದರೆ ಸಾವರ್ಜನಿಕರ ಕೈಗೆ ಸಿಕ್ಕಿ ಬಿದ್ದಿದ್ದು ಹಿಗ್ಗಾ ಮುಗ್ಗಾ ಗೂಸಾ ನೀಡಿದ್ದಾರೆ.

Comments are closed.