
ಮೈಸೂರು : ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ 2019 ಹಿಂದೆ ರಾಜಕೀಯ ಹುನ್ನಾರ ಅಡಗಿದೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪೌರತ್ವ ಕಾಯ್ದೆ ವಿರುದ್ಧ ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪೌರತ್ವ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ರಾಜ್ಯ ಸರಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೇಂದ್ರ ಸರಕಾರ ಈ ಕಾಯ್ದೆಯನ್ನ ಹಿಂಪಡೆಯುವವರೆಗೂ ನಾವು ಪ್ರತಿಭಟನೆ ಮಾಡುತ್ತೇವೆ. ಕಾಯ್ದೆ ನಾವು ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ಪೊಲೀಸರು ಅದನ್ನು ತಡೆದಿದ್ದಾರೆ ಎಂದು ದೂರಿದರು.
ಈ ಹಿಂದೆ ನಾವು ಹಿಂದೆ ಪ್ರತಿಭಟನೆ ಮಾಡಲು ಮುಂದಾದಾಗ 144 ಸೆಕ್ಷನ್ ಜಾರಿ ಮಾಡಿದ್ದರು. ಈಗಲೂ ಸಹ ಅದನ್ನೆ ಮಾಡಿದ್ದಾರೆ. ಇದು ನಮ್ಮ ಪ್ರತಿಭಟನೆಯನ್ನ ಹತ್ತಿಕ್ಕುವ ಪ್ರಯತ್ನ. ಮೈಸೂರಿಗೆ 144 ಸಕ್ಷನ್ ಅವಶ್ಯಕತೆ ಇಲ್ಲ.
ಪ್ರತಿಭಟನೆ ಮಾಡುವವರೆಲ್ಲಾ ಹಿಂಸಾಚಾರಿಗಳಲ್ಲ, ರೌಡಿ ಶೀಟರ್ ಗಳಲ್ಲ. ಇದು ನಮ್ಮ ಪ್ರಜೆಗಳಿಗೆ ಮಾಡುತ್ತಿರುವ ಅವಮಾನ. ಇದು ನೂರಕ್ಕೆ ನೂರರಷ್ಟು ರಾಜಕೀಯ ಹುನ್ನಾರ ಎಂದು ಹರಿಹಾಯ್ದರು
ಕೇಂದ್ರದ ಈ ಕಾಯ್ದೆಯಲ್ಲಿ ಕೇವಲ 3 ದೇಶಗಳಿಗೆ ಮಾತ್ರ ಪೌರತ್ವ ಕಾಯ್ದೆಯಲ್ಲಿ ಜಾರಿ ಮಾಡಿದ್ದಾರೆ. ಬೇರೆಲ್ಲೂ ಮುಸ್ಲೀಂಯೇತರ ನಿರಾಶ್ರಿತರು ಇಲ್ಲವೇ ಎಂದು ಇದೇ ವೇಳೆ ಪ್ರಶ್ನಿಸಿದರು.
Comments are closed.