
ಬೆಂಗಳೂರು: ಹೃದಯದ ಚಿಕಿತ್ಸೆಗಾಗಿ ಆಸ್ಪತ್ರಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ಅವರು ನಾಳೆ ಡಿಸ್ಚಾರ್ಜ್ ಆಗ್ತಾರೆ ಎಂದರು.
ನಾನು ಗೆದ್ದಾಗಲೂ ಹೇಳಿದ್ದೆ. ಸಿದ್ದರಾಮಯ್ಯವರು ನಮ್ಮ ನಾಯಕರು ಅಂತ. ಪಕ್ಷ ಬದಲಾವಣೆ ಮಾಡಿದರೂ ಅವರು ನಮ್ಮ ಗುರುಗಳು ಎಂದರು.
ಸಿದ್ದರಾಮಯ್ಯ ಮತ್ತು ನಾನು ಏನೇನು ಮಾತನಾಡಿದ್ದೆವು ಎಂದು ಹೇಳೋಕಾಗಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
Comments are closed.