ಕರ್ನಾಟಕ

ಬೇರೆಯವರ ಸಾಲಕ್ಕೆ ಸಹಿ ಹಾಕುವ ಮುನ್ನ ಸರಿಯಾಗಿ ಯೋಚಿಸಿ..

Pinterest LinkedIn Tumblr

ಬೆಂಗಳೂರು :  ಮೂಲ ಸಾಲಗಾರರು ಸಾಲ ಮರುಪಾವತಿ ಮಾಡದೇ ಇದ್ದರೆ, ಬ್ಯಾಂಕ್ ಸಾಲಗಾರನಿಗಿಂತ ಮೊದಲು ಗ್ಯಾರಂಟಿದಾರನ ಆಸ್ತಿಗೆ ಕೈ ಹಾಕಬಹುದು ಅದಕ್ಕಾಗಿ ಸಾಲಕ್ಕೆ ಖಾತ್ರಿ ಹಾಕುವ ಮುನ್ನ ಸ್ವಲ್ಪ ಎಚ್ಚರ ವಹಿಸುವುದು ಒಳ್ಳೆಯದು ಎಂದು ರಾಜ್ಯ ಹೈಕೋರ್ಟ್ ಹೇಳಿದೆ.

ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಬ್ಯಾಂಕ್ ಸಾಲಾಗಾರ ಇಲ್ಲವೇ ಖಾತ್ರಿ ದಾರನ ಮೇಲೆ ಕ್ರಮ ಜರುಗಿಸಬಹುದು. ಅದು ಬ್ಯಾಂಕ್ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿದೆ ಹೀಗಾಗಿ ಬೇರೆಯವರ ಸಾಲಕ್ಕೆ ಸಹಿ ಹಾಕುವ ಮುನ್ನ ಯೋಚಿಸುವುದು ಒಳ್ಳೆಯದು.

ಕಾನೂನು ಪ್ರಕಾರ ಬ್ಯಾಂಕ್ ಮೂಲ ಸಾಲಗಾರ ಅಥವಾ ಖಾತ್ರಿದಾರ, ಇಬ್ಬರಲ್ಲಿ ಯಾರ ವಿರುದ್ಧ ಬೇಕಾದರೂ ಕ್ರಮ ಜರುಗಿಸಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ.

Comments are closed.