ಕರ್ನಾಟಕ

ರೇಷನ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ,

Pinterest LinkedIn Tumblr

ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ರಾಜ್ಯದ ಎಲ್ಲಾ ಬಡ ಬಡ ಕುಟುಂಬಗಳಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ, ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವವರಿಗೆ ಈಗಾಗಲೇ ಪಡಿತರ ಅಂಗಡಿಗಳಲ್ಲಿ ಆಹಾರ ದಾನ್ಯಗಳನ್ನ ವಿತರಣೆ ಮಾಡುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಕೆಲವು ಸಮಯಗಳಿಂದ ಪಡಿತರ ದಾನ್ಯಗಳ ವಿತರಣೆಯನ್ನ ಬದಲಾವಣೆಗಳನ್ನ ಮಾಡಲಾಗುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಈಗ ನೀಡಲಾಗುತ್ತಿರುವ ಪಡಿತರ ದಾನ್ಯಗಳಲ್ಲಿ ಭಾರಿ ದೊಡ್ಡ ಬದಲಾವಣೆಯನ್ನ ಮಾಡಲು ಆಹಾರ ಸರಬರಾಜು ಇಲಾಖೆಯು ರಾಜ್ಯ ಸರ್ಕಾರಕ್ಕೆ ಮನವಿಯನ್ನ ಮಾಡಿಕೊಂಡಿದೆ.

ಹಾಗಾದರೆ ಆ ದೊಡ್ಡ ಬದಲಾವಣೆ ಏನು ಎನ್ನುವದರ ಬಗ್ಗೆ ಸಂಪೂರ್ಣ ಮಾಹಿತಿ.
ಈ ಹಿಂದೆ ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಕುಟುಂಬದ ಎಲ್ಲಾ ಸದಸ್ಯರಿಗೆ ಏಳು ಕೆಜಿ ಅಕ್ಕಿಯನ್ನ ಉಚಿತವಾಗಿ ನೀಡಲಾಗುತ್ತಿತ್ತು, ಆದರೆ ಈಗ ಅದರಲ್ಲಿ ದೊಡ್ಡ ಬದಲಾವಣೆ ಮಾಡಲಾಗುತ್ತಿದೆ. ಹೌದು ಸ್ನೇಹಿತರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿನ ಸದಸ್ಯನಿಗೆ ನೀಡಲಾಗುತ್ತಿದ್ದ ಏಳು ಕೆಜಿ ಅಕ್ಕಿಯಲ್ಲಿ ಎರಡು ಕೆಜಿ ಅಕ್ಕಿಯನ್ನ ಕಡಿತ ಮಾಡಿ ಐದು ಕೆಜಿ ಅಕ್ಕಿಯನ್ನ ನೀಡಲು ಆಹಾರ ಸರಬರಾಜು ಇಲಾಖೆಯು ರಾಜ್ಯ ಸರ್ಕಾರಕ್ಕೆ ಮನವಿಯನ್ನ ಮಾಡಿಕೊಂಡಿದೆ.

ಇನ್ನು ಈ ಕುರಿತಂತೆ ಇನ್ನುಮುಂದೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿ ಬಡ ಕುಟುಂಬದ ಪ್ರತಿ ಸದಸ್ಯನಿಗೆ ಐದು ಕೆಜಿ ಅಕ್ಕಿಯನ್ನ ನೀಡಲು ಚಿಂತನೆ ಮಾಡಲಾಗುತ್ತಿದೆ. ಇನ್ನು ಜನರಿಗೆ ರಾಜ್ಯ ಸರ್ಕಾರ ಕೊಟ್ಟಿರುವ ಸಿಹಿ ಸುದ್ದಿ ಏನು ಅಂದರೆ, ರಾಜ್ಯ ಸರ್ಕಾರ ಒಂದುವೇಳೆ ಏಳು ಕೆಜಿ ಅಕ್ಕಿಯ ಬದಲಾಗಿ ಐದು ಕೆಜಿ ಅಕ್ಕಿಯನ್ನ ನೀಡಲು ಆರಂಭ ಮಾಡಿದರೆ ಎಲ್ಲರಿಗೂ ಕಡ್ಡಾಯವಾಗಿ ಒಂದು ಕೆಜಿ ತೊಗರಿ ಬೆಳೆಯನ್ನ ನೀಡಲಾಗುತ್ತದೆ. ಇನ್ನು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಕ್ಕಿಯ ಜನರು ಅಷ್ಟಾಗಿ ಇಷ್ಟ ಪಡುತ್ತಿಲ್ಲ ಮತ್ತು ಅವರು ಅಕ್ಕಿಯನ್ನ ಹೆಚ್ಚಾಗಿ ಬಳಸುವುದಿಲ್ಲ ಅನುವ ಕಾರಣಕ್ಕೆ ಆ ಜಿಲ್ಲೆಗಳಲ್ಲಿ ಅಕ್ಕಿಯ ಪ್ರಮಾಣವನ್ನ ಕಡಿತ ಮಾಡಿ ರಾಗಿಯನ್ನ ನೀಡಲು ನಿರ್ಧಾರ ಮಾಡಲಾಗಿದ್ದು ತೊಗರಿ ಬೆಲೆ ಮಾತ್ರ ಎಲ್ಲರಿಗೂ ಕಡ್ಡಾಯವಾಗಿ ದೊರೆಯಲಿದೆ.

ಇನ್ನು ಜನರಲ್ಲಿ ಮೂಡಿರುವ ಪ್ರಶ್ನೆ ಏನು ಅಂದರೆ ಸರ್ಕಾರ ನೀಡುವ ಒಂದು ಕೆಜಿ ತೊಗರಿ ಬೆಳೆ ಒಂದು ತಿಂಗಳಿಗೆ ಸಾಕಾಗುತ್ತ ಅನ್ನುವುದಾಗಿದೆ. ಇನ್ನು ರೇಷನ್ ವಿತರಣೆಯಲ್ಲಿ ಆಗುತ್ತಿರುವ ಈ ದೊಡ್ಡ ಬಲಾವಣೆಯೂ ಜನರಿಗೆ ಶಾಕ್ ಕೊಟ್ಟಿದ್ದು ಇದು ಜಾರಿಗೆ ಬಂದರೆ ಜನರಿಗೆ ಸ್ವಲ್ಪ ಕಷ್ಟ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

Comments are closed.