ಕೋಲಾರ: ಪೊಲೀಸರ ವೇಷ ಧರಿಸಿ ದರೋಡೆ ನಡೆಸುತ್ತಿದ್ದ ನಾಲ್ವರು ಖದೀಮರ ತಂಡ ಮಾಲೂರು ಪೊಲೀಸರ ಬಲೆಗೆ ಬಿದ್ದಿದೆ.
ಬಂಗಾರಪೇಟೆ ಮೂಲದ ಅನಿಲ್ (32), ಶೇಷಾದ್ರಿ (21), ರಾಬಿನ್ (21), ಷಬೀರ್ (20) ಬಂಧಿತ ಆರೋಪಿಗಳು, ಮಾಲೂರು ಕೈಗಾರಿಕಾ ಪ್ರದೇಶದ ಕೂರಂಡಹಳ್ಳಿ ಬಳಿ ಶುಕ್ರವಾರ ದರೋಡೆಗೆ ಹೊಂಚು ಹಾಕುತ್ತಿದ್ದಾಗ ಮಾಲೂರು ಪೊಲೀಸ್ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಖಾಕಿ ಬಟ್ಟೆ ಧರಿಸಿ ಬೈಕ್ಗಳಿಗೆ ಪೋಲಿಸ್ ಎಂಬ ಸ್ಟಿಕ್ಕರ್ ಅಂಟಿಸಿಕೊಳ್ಳುತ್ತಿದ್ದ ಖದೀಮರು ರಸ್ತೆಗಿಳಿಯುತ್ತಿದ್ದರು. ತಮ್ಮನ್ನು ಪೊಲೀಸರು ಎಂದು ಹೇಳಿಕೊಂಡು ದಾರಿಯಲ್ಲಿ ಹೋಗುವ ಲಾರಿಗಳು ಹಾಗೂ ಸರಕು ಸಾಗಣಿಕೆ ವಾಹನಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.
ಈ ಖತರ್ನಾಕ್ ಗ್ಯಾಂಗ್ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.