ಕರ್ನಾಟಕ

ಏಕಾಏಕಿ ಫ್ಲೈಓವರ್‌ನಿಂದ ನೆಗೆದ ಕಾರು – ಕೆಳಗೆ ನಿಂತಿದ್ದ ಮಹಿಳೆಯ ಸಾವು

Pinterest LinkedIn Tumblr

ನಗರದ ರಾಯದುರ್ಗಮ್‌ ಸರ್ಕಲ್‌ ಬಳಿಯ ಬಯೋಡೈವರ್ಸಿಟಿ ಫ್ಲೈಓವರ್‌ನಲ್ಲಿ ಸಂಚರಿಸುತ್ತಿದ್ದ ಕಾರೊಂದು ಏಕಾಏಕಿ ಫ್ಲೈಓವರ್‌ನಿಂದ ನೆಗೆದಿದ್ದು, ಕೆಳಗೆ ನಿಂತಿದ್ದ ಮಹಿಳೆಯ ಮೇಲೆ ಬಿದ್ದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ದಾರುಣ ಘಟನೆ ಶನಿವಾರ ನಡೆದಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಫ್ಲೈ ಓವರ್‌ನಲ್ಲಿ ಕಾರು ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ನೆಗೆದಿದೆ. ಈ ವೇಳೆ ಸತ್ಯವಾಣಿ(40) ಕೆಳಗಡೆ ರಸ್ತೆಯೊಂದರಲ್ಲಿ ನಿಂತಿದ್ದರು.

ಗಾಯಗೊಂಡವರು ಕಾರಿನೊಳಗೆ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಅವರನ್ನು ಪಕ್ಕದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತ ಮಹಿಳೆಯ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಹೈದರಾಬಾದ್‌ ಮೇಯರ್‌ ಅವರು ಘೋಷಿಸಿದ್ದಾರೆ. ಪ್ರಕರಣ ಹಿನ್ನೆಲೆಯಲ್ಲಿ ಫ್ಲೈಓವರ್‌ ಅನ್ನು ಮೂರು ದಿನಗಳ ಕಾಲ ಬಂದ್‌ ಮಾಡಲಾಗಿದೆ. ಪೊಲೀಸರು ಕೇಸು ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

Comments are closed.