ಕರ್ನಾಟಕ

ತಂದೆಯನ್ನು ಹತ್ಯೆ ಮಾಡಿ ಅಪಘಾತದಲ್ಲಿ ಮೃತ ಎಂದು ನಂಬಿಸಿದ್ದ…

Pinterest LinkedIn Tumblr


ಧಾರವಾಡ: ತಂದೆಯನ್ನು ಹತ್ಯೆ ಮಾಡಿ ಅಪಘಾತ ಎಂದು ನಂಬಿಸಿದ್ದ ಮಗ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಕೊಲೆಯಲ್ಲಿ ಕೈಜೋಡಿಸಿದ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹನುಮಂತಪ್ಪ ಕಿರೇಸೂರ (45) ಕೊಲೆಯಾದವರು. ರಮೇಶ ಕಿರೇಸೂರ, ವೆಂಕಪ್ಪ ಹಾಗೂ ಸತ್ಯಪ್ಪ ಬಂಧಿತರು.

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಜಾವೂರ ಗ್ರಾಮದ ಹನುಮಂತಪ್ಪ ಕಿರೇಸೂರ ಇವರ ಮಗ ರಮೇಶ ಕಿರೇಸೂರ, ಅಪ್ಪ-ಮಗನ ನಡುವೆ ಹಲವು ವಿಚಾರಗಳಿಗೆ ಜಗಳ ನಡೆಯುತ್ತಿತ್ತು. ರಮೇಶ ಕಿರೇಸೂರ ಸಂಬಂಧಿಕರಾದ ವೆಂಕಪ್ಪ ಹಾಗೂ ಸತ್ಯಪ್ಪ ಅವರಿಗೆ ತಂದೆ ಜಗಳ ಮಾಡಿ ಕಿರಿ,ಕಿರಿ ಮಾಡುತ್ತಾನೆ ಎಂದು ಹೇಳಿಕೊಂಡಿದ್ದ. ಜಗಳ ತಪ್ಪಿಸಬೇಕಾದರೆ ತಂದೆ ಹತ್ಯೆ ಮಾಡುವಂತೆ ಇಬ್ಬರು ರಮೇಶನಿಗೆ ಸಲಹೆ ನೀಡಿದ್ದರು. ಅಲ್ಲದೆ ಹತ್ಯೆಗೆ ಸಹಾಯ ಕೂಡ ಮಾಡಿದ್ದರು.

ಅಕ್ಟೋಬರ್ 27ರ ರಾತ್ರಿ ಜಾವೂರ-ಹಂಚಿನಾಳ ರಸ್ತೆ ಮಧ್ಯೆ ಹನುಮಂತಪ್ಪ ಅವರ ಶವ ಪತ್ತೆಯಾಗಿತ್ತು. ಮೂವರು ಸೇರಿ ಕೊಲೆ ಮಾಡಿ ಶವವನ್ನು ರಸ್ತೆ ಮಧ್ಯೆ ಇಟ್ಟು ಅಪಘಾತ ಎಂದು ನಂಬಿಸಿದ್ದರು.
ಅನುಮಾನ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ನವಲಗುಂದ ಠಾಣೆಯಲ್ಲಿ ಕೇಸು ದಾಖಲಾಗಿದೆ.

Comments are closed.