ರಾಷ್ಟ್ರೀಯ

ನಾನು 4 ಬಾರಿ ಮುಖ್ಯಮಂತ್ರಿ ಆಗಿದ್ದೇನೆ, ಬಿಜೆಪಿ-ಶಿವಸೇನಾ ಸರ್ಕಾರ ರಚಿಸಲಿ: ಪವಾರ್

Pinterest LinkedIn Tumblr


ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕಗ್ಗಂಟು ಮುಂದುವರಿದಿರುವ ನಡುವೆ ಎನ್ ಸಿಪಿ ವರಿಷ್ಠ ಶರದ್ ಪವಾರ್, ನಾವು ವಿರೋಧ ಪಕ್ಷದಲ್ಲಿಯೇ ಕುಳಿತುಕೊಳ್ಳುತ್ತೇವೆ. ಶಿವಸೇನಾ ಮತ್ತು ಬಿಜೆಪಿ ನಡುವಿನ ಬಿಕ್ಕಟ್ಟು ಪರಿಹರಿಸಿಕೊಳ್ಳಲಿ. ಮತದಾರರು ಅವರಿಗೆ ಜನಾದೇಶ ನೀಡಿರುವುದಾಗಿ ಸ್ಪಷ್ಟಪಡಿಸುವ ಮೂಲಕ ಎನ್ ಸಿಪಿ ಮತ್ತು ಶಿವಸೇನಾ ಮೈತ್ರಿ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಈ ಸಂದರ್ಭದಲ್ಲಿ ನಾನು ಏನೂ ಹೇಳಲು ಬಯಸುವುದಿಲ್ಲ. ಬಿಜೆಪಿ ಮತ್ತು ಶಿವಸೇನಾಗೆ ಮತದಾರರು ಜನಾದೇಶ ನೀಡಿದ್ದಾರೆ. ಹೀಗಾಗಿ ಆದಷ್ಟು ಶೀಘ್ರವಾಗಿ ಸರ್ಕಾರ ರಚಿಸಲಿ. ನಮಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಜನಾದೇಶ ನೀಡಿದ್ದಾರೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಈ ಸಂದರ್ಭದಲ್ಲಿ ಶಿವಸೇನಾ-ಎನ್ ಸಿಪಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವರದಿಯನ್ನು ಪವಾರ್ ತಳ್ಳಿಹಾಕಿದ್ದಾರೆ. ಶಿವಸೇನಾ ಬಿಜೆಪಿ ಜತೆ ಕಳೆದ 25 ವರ್ಷಗಳಿಂದ ಮೈತ್ರಿಯಲ್ಲಿದೆ. ಇವತ್ತಲ್ಲ, ನಾಳೆ ಅವರು ಮತ್ತೆ ಒಂದಾಗಲಿದ್ದಾರೆ ಎಂದು ಪವಾರ್ ಮಾರ್ಮಿಕವಾಗಿ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರದಂತೆ ತಡೆಯಲು ಇರುವ ಒಂದೇ ಒಂದು ಅವಕಾಶ ಬಿಜೆಪಿ ಮತ್ತು ಶಿವಸೇನಾ ಸರ್ಕಾರ ರಚನೆಯಾಗಬೇಕು. ನಾನು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದೇನೆ, ಮತ್ತೆ ನನಗೆ ಸಿಎಂ ಆಗಬೇಕೆಂಬ ಹಂಬಲ ಇಲ್ಲ ಎಂದು ಪವಾರ್ ಈ ಸಂದರ್ಭದಲ್ಲಿ ಹೇಳಿದರು.

Comments are closed.