ಕರ್ನಾಟಕ

ಒಪ್ಟೋ ಕಂಪನಿಯಿಂದ ಎಸ್ ಬಿಐ ಬ್ಯಾಂಕ್ ಗೆ 354 ಕೋಟಿ ವಂಚನೆ

Pinterest LinkedIn Tumblr


ಬೆಂಗಳೂರು: ಒಪ್ಟೋ ಸರ್ಕ್ಯೂಟ್ಸ್ ಇಂಡಿಯಾ ಲಿಮಿಟೆಡ್ ಎಂಬ ಕಂಪನಿಯೊಂದು ನಗರದ ಎಸ್ ಬಿ ಐ ಬ್ಯಾಂಕ್ ನಿಂದ 354 ಕೋಟಿ ರೂ. ಸಾಲ ಪಡೆದು ಮರುಪಾವತಿಸದೇ ವಂಚಿಸಿದೆ ಎಂದು ಸಿಬಿಐ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡುವ ಕಂಪನಿ ಇದಾಗಿದ್ದು, ಸಾಲ ಮರುಪಾವತಿಸದೇ ವಂಚಿಸಿರುವುದಾಗಿ ಎಸ್ ಬಿ ಐ ಬ್ಯಾಂಕ್ ನ ಎಜಿಎಂ ರಾಮಕೃಷ್ಣ ಶೆಣೈ, ಒಪ್ಟೋ ಕಂಪನಿ ಮುಖ್ಯಸ್ಥ ವಿನೋದ್ ರಾಮ‌ನಾನಿ ವಿರುದ್ಧ ಸಿಬಿಐಗೆ ದೂರು ನೀಡಿದ್ದರು.

ಎಸ್ ಬಿಐ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಸಿಬಿಐ ಅಧಿಕಾರಿಗಳು ನಿನ್ನೆ ಕಂಪನಿ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು.

ಒಪ್ಟೋ ಸರ್ಕ್ಯೂಟ್ಸ್ ವಿರುದ್ಧ ಸ್ಟೇಟ್​​ ಬ್ಯಾಂಕ್ ಆಫ್​​​ ಇಂಡಿಯಾಗೆ 354 ಕೋಟಿ, ಸಿಂಗಾಪುರದ ಡಿಬಿಎಸ್ ಬ್ಯಾಂಕ್ ಗೆ 178 ಕೋಟಿ ರೂ. ವಂಚಿಸಿದ ಆರೋಪ ಕೇಳಿಬಂದಿದೆ.

Comments are closed.