ಕರ್ನಾಟಕ

ಇನ್ಮುಂದೆ ಮಕ್ಕಳಿಗೆ ಹಾಲಿನ ಪುಡಿಯ ಬದಲಾಗಿ ಫ್ಲೆಕ್ಸಿ ಪ್ಯಾಕ್‌ನಲ್ಲಿ ಹಾಲು ಪೂರೈಕೆ .

Pinterest LinkedIn Tumblr

ಬೆಳಗಾವಿ : ರಾಜ್ಯದ ಶಾಲಾ ಮಕ್ಕಳಿಗೆ ಈ ಮೊದಲು ಹಾಲು ವಿತರಣೆ ಮಾಡಲಾಗುತ್ತಿತ್ತು. ಆನಂತ್ರ ಇದೀಗ ಹಾಲಿನ ಪುಡಿಯನ್ನು ನೀಡಲಾಗುತ್ತಿದೆ. ಆದ್ರೇ ಇಂತಹ ಹಾಲಿನ ಪುಡಿಯಲ್ಲೇ ಶಿಕ್ಷಣ ಇಲಾಖೆಯ ಕೆಲವರು ಮಾರಿಕೊಳ್ಳುತ್ತಿರುವುದಾಗಿ ತಿಳಿದು ಬಂದ ಹಿನ್ನಲೆಯಲ್ಲಿ ಇದಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಹೀಗಾಗಿ ಇನ್ಮುಂದೆ ಮಕ್ಕಳಿಗೆ ಹಾಲಿನ ಪುಡಿಯ ಬದಲಾಗಿ ಫ್ಲೆಕ್ಸಿ ಪ್ಯಾಕ್ ಗಳಲ್ಲಿ ಹಾಲನ್ನೇ ಪೂರೈಕೆ ಮಾಡಲು ಮುಂದಾಗಿದೆ.

ಈ ಕುರಿತಂತೆ ಮಾಹಿತಿ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರಾಜ್ಯದ ಶಾಲಾ ಮಕ್ಕಳಿಗೆ ಹಾಲಿನ ಪುಡಿಯನ್ನು ವಿತರಿಸಲಾಗುತ್ತಿದೆ. ಆದ್ರೇ ಇಂತಹ ಹಾಲಿನ ಪುಡಿಯನ್ನೇ ಶಿಕ್ಷಣ ಇಲಾಖೆಯ ಕೆಲವರು ಮಾರಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೆಎಂಎಫ್ ಮೂಲಕ ಇನ್ಮುಂದೆ ಫ್ಲೆಕ್ಸಿ ಪ್ಯಾಕ್ ಮೂಲಕ 200 ಮಿ.ಲೀ ಹಾಲನ್ನು ವಿತರಿಸಲು ಮುಂದಾಗಿದೆ ಎಂದು ಹೇಳಿದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ಈಗಾಗಲೇ ತುಮಕೂರು, ಬೆಳಗಾವಿ, ಮಂಗಳೂರು ಮೊದಲಾದ ಒಕ್ಕೂಟಗಳ ಘಟಕಗಳಲ್ಲಿ 200 ಮಿ.ಲೀ ನ ಫ್ಲೆಕ್ಸಿ ಪ್ಯಾಕೆಟ್ ಗಳನ್ನು ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದಾಗಿ ಮಕ್ಕಳಿಗೆ ಗುಣಮಟ್ಟದ ಹಾಲು ದೊರೆಯಲಿದೆ ಎಂದು ಹೇಳಿದರು.

Comments are closed.