ಕರ್ನಾಟಕ

ಕೊಡಗಿನಲ್ಲಿ ಭೂಮಿಯೊಳಗಿನ ನಿಗೂಢ ಶಬ್ದಕ್ಕೆ ಕಾರಣ ತಿಳಿಸಿದ ವಿಜ್ಞಾನಿಗಳು

Pinterest LinkedIn Tumblr


ಮಡಿಕೇರಿ: ಕೊಡಗಿನಾದ್ಯಂತ ಕೆಲದಿನಗಳಿಂದ ಕೇಳಿ ಬರುತ್ತಿದ್ದ ನಿಗೂಢವಾದ ಗುಡುಗಿದ, ನೀರು ಹರಿದಂತೆ ಶಬ್ದಕ್ಕೆ Soil Pipin Phenomenon ಕಾರಣ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ತನ್ಮೂಲಕ ಅವರು ಜನರ ಆತಂಕವನ್ನು ದೂರ ಮಾಡಿದ್ದಾರೆ.

ಕಳೆದ ವಾರ ಭಾಗಮಂಡಲ ವ್ಯಾಪ್ತಿಯಲ್ಲಿ ಈ ಶಬ್ದಗಳು ಕೇಳಿಬಂದಿದ್ದವು. ಸೋಮವಾರ ರಾತ್ರಿ ವಿರಾಜಪೇಟೆ ತಾಲೂಕಿನ ಪೇರೂರು ಗ್ರಾಮದಲ್ಲಿ ಭೂಮಿ ಒಳಗೆ ನೀರು ಹರಿದಂತೆ ಶಬ್ದ ಕೇಳಿ ಬಂದಿತ್ತು. ಇದೆಲ್ಲದರಿಂದಾಗಿ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಇತ್ತೀಚೆಗೆ ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿತ್ತು. ಇದರಿಂದಾಗಿ ಅಂತರ್ಜಲ ಮಟ್ಟ ಕೂಡ ಹೆಚ್ಚಾಗಿತ್ತು. ಅಂತರ್ಜಲ ಭೂಮಿಯ ಒಳಗೆ ಹರಿಯುವಾಗ ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ. ಅಲ್ಲಿ ಹರವಿಗೆ ಅಡ್ಡಿಯುಂಟಾದಾಗ ಅದು ತನ್ನ ಹರಿವಿನ ದಿಕ್ಕನ್ನು ಬದಲಿಸುತ್ತದೆ. ಆಗ ನೀರು ಹರಿಯುವಿಕೆ ಅಥವಾ ಗುಡುಗಿನಂಥ ಶಬ್ದ ಉಂಟಾಗುತ್ತದೆ. ಇದನ್ನು High Ground Water Level Soil Piping ಎಂದು ಕರೆಯಲಾಗುತ್ತದೆ. ಆದ್ದರಿಂದ ಜನರು ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ ಎಂದು ವಿಜ್ಞಾನಿಗಳು ಧೈರ್ಯ ಹೇಳಿದ್ದಾರೆ.

Soil Piping ಎಂಬುದು ಪ್ರಕೃತಿ ಸಹಜ ಪ್ರಕ್ರಿಯೆ. Soil Piping ಹೆಚ್ಚಾದಾಗ Gap ಉಂಟಾಗಿ ಭೂಮಿ ಕುಸಿಯುವ ಭೀತಿ ಇರುತ್ತದೆ. ಆದರೆ ಇದು ತುಂಬಾ ಅಪರೂಪದ ವಿದ್ಯಮಾನ. ಕೊಡಗಿನಲ್ಲಿ ಇಂಥ ವಿದ್ಯಮಾನ ಉಂಟಾಗುವ ಸಾಧ್ಯತೆ ಕಡಿಮೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Comments are closed.