ಕರ್ನಾಟಕ

ಕುಕ್ಕರಳ್ಳಿ ಕೆರೆಯ ಪೆಲಿಕಾನ್ ಪಕ್ಷಿಗಳ ಸಾವು : ಜನರಲ್ಲಿ ಅತಂಕ

Pinterest LinkedIn Tumblr

ಮೈಸೂರು: ನಗರದ ಕುಕ್ಕರಳ್ಳಿ ಕೆರೆಯಲ್ಲಿ ಇತ್ತೀಚೆಗೆ ಪೆಲಿಕಾನ್ ಪಕ್ಷಿಗಳ ಸಾವಿಗೆ ಹಕ್ಕಿಜ್ವರ ಕಾರಣವಲ್ಲ ಎಂದು ಡಿಸಿಎಫ್ ಪ್ರಶಾಂತ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ. ಸ್ಪಾಟ್‍ಬಲ್ಡ್ ಪೆಲಿಕಾನ್ ಎಂಬ ಪಕ್ಷಿಯು ಅ.25 ರಂದು ಕುಕ್ಕರಳ್ಳಿ ಕೆರೆಯ ಪ್ರವೇಶದ್ವಾರದ ಬಳಿ ಅನಾರೋಗ್ಯದಿಂದ ಮೃತಪಟ್ಟಿತ್ತು. 3 ದಿನಗಳ ನಂತರ ಮತ್ತೊಂದು ಪೆಲಿಕಾನ್ ಪಕ್ಷಿ ಸಾವನ್ನಪ್ಪಿದ್ದು, ಹಕ್ಕಿಜ್ವರದಿಂದ ಪಕ್ಷಿಗಳು ಸಾಯುತ್ತಿರಬೇಕೆಂಬ ಆತಂಕ ಸಾರ್ವಜನಿಕರಲ್ಲಿ ಉಂಟಾಗಿತ್ತು.

ಬೆಂಗಳೂರಿನ ಇನ್ಸ್‍ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ಸ್ ಎಂಬ ಸಂಸ್ಥೆಯ ತಜ್ಞರು ನೀಡಿರುವ ಪ್ರಾಥಮಿಕ ವರದಿಯಲ್ಲಿ ಹಕ್ಕಿಗಳ ಸಾವಿಗೆ ಹಕ್ಕಿ ಜ್ವರ ಅಥವಾ ಇನ್ನಿತರ ಸಾಂಕ್ರಾಮಿಕ ರೋಗಗಳು ಕಾರಣ ಎಂದು ತಿಳಿಸಿದ್ದಾರೆ. ಹಾಗಾಗಿ ಈ ಬಗ್ಗೆ ಸಾರ್ವಜನಿಕರು ಆತಂಕಕ್ಕೀಡಾಗಬಾರದೆಂದು ಪ್ರಶಾಂತ್‍ಕುಮಾರ್ ತಿಳಿಸಿದ್ದಾರೆ.

Comments are closed.