ಕರ್ನಾಟಕ

ದೀಪಾವಳಿ ಪ್ರಯುಕ್ತ ಭಿಕ್ಷುಕರಿಗೆ ಸಿಹಿ ಹಂಚಿದ ಡಿಸಿಎಂ ಗೋವಿಂದ ಕಾರಜೋಳ

Pinterest LinkedIn Tumblr


ಬೆಂಗಳೂರು(ಅ.28): ದೀಪಾವಳಿ ಪ್ರಯುಕ್ತ ಡಿಸಿಎಂ ಗೋವಿಂದ ಕಾರಜೋಳ ಅವರು ಸುಮನಹಳ್ಳಿಯ ಭಿಕ್ಷುಕರ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಸಂತ್ರಸ್ತರೊಂದಿಗೆ ಹಬ್ಬ ಆಚರಿಸಿದ್ದಾರೆ.

ಭಿಕ್ಷುಕರ ಕಾಲೋನಿಯ ಸಂತ್ರಸ್ತರಿಗೆ ಸಿಹಿ ವಿತರಿಸಿ ಗೋವಿಂದ ಕಾರಜೋಳ ದೀಪಾವಳಿ ಆಚರಣೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಭಿಕ್ಷಾಟನೆ ಎನ್ನುವುದು ಸಾಮಾಜಿಕ ಪಿಡುಗು. ಅದರ ಮೂಲೋತ್ಪಾಟನೆಗಾಗಿ ಅಂದೇ ಜಯಚಾಮರಾಜೇಂದ್ರ ಒಡೆಯರ್ ಭಿಕ್ಷುಕರ ಪುನರ್ವಸತಿ ಕೇಂದ್ರ ಸ್ಥಾಪಿಸಿದ್ದರು ಎಂದು ಸ್ಮರಿಸಿದರು.

ಮಾಧ್ಯಮ ಮತ್ತು ಸಾಮಾಜಿಕ ಹೋರಾಟಗಾರರ ಮೇಲೆ ಇಮ್ರಾನ್​​ ಖಾನ್​​ ಸರ್ಕಾರ ದಬ್ಬಾಳಿಕೆ; ಸಾರ್ವಜನಿಕರ ಆಕ್ರೋಶ

ರಾಜ್ಯದ 14 ಕೇಂದ್ರಗಳಲ್ಲಿ 1252 ಜನ ಭಿಕ್ಷುಕರು ಇದ್ದಾರೆ. ಸೆಸ್​​ನಲ್ಲಿ ಇದನ್ನು ನಿರ್ವಹಣೆ ಮಾಡಲಾಗುತ್ತಿದೆ. ಬಿಬಿಎಂಪಿಯಿಂದ 114 ಕೋಟಿ ಸೆಸ್, 17 ಕೋಟಿ ಹೀಗೆ ಒಟ್ಟು 164 ಕೋಟಿ ಸೆಸ್ ಬರಬೇಕಿದೆ. ಸೆಸ್ ಬಾಕಿ ಪಾವತಿಸುವಂತೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ನನ್ನ ಕೈಲಿದೆ‌ ಎಂಬ ಎಚ್​ಡಿಕೆ ಹೇಳಿಕೆಗೆ, ಅವರ ಶಾಸಕರು ಆಚೀಚೆ ಹೋಗುತ್ತಾರೆ ಎನ್ನುವ ಭಯದಿಂದ ಈ ರೀತಿ ಹೇಳಿರಬಹುದು. ಇದು ಪಕ್ಕಾ ರಾಜಕೀಯ ಹೇಳಿಕೆ ಅಷ್ಟೆ ಎಂದರು.

Comments are closed.