ಕರ್ನಾಟಕ

ಹವಾಮಾನ ಇಲಾಖೆಯಿಂದ ಎಚ್ಚರಿಕೆ ಕರೆ : ‘ಕ್ಯಾರ್’ ಚಂಡಮಾರುತ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚು.

Pinterest LinkedIn Tumblr

ನವದೆಹಲಿ: ಮುಂದಿನ 24 ಗಂಟೆಗಳ ಕಾಲ ‘ಕ್ಯಾರ್’ ಚಂಡಮಾರುತದ ಅಬ್ಬರ ತೀವ್ರ ತೀಕ್ಷ್ಣವಾಗಿ ಬಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಗಡುಗು ಮಿಂಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 24 ಗಂಟೆಗಳ ಕಾಲ ಪೂರ್ವ ಸೆಂಟ್ರಲ್ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರ ಹೆಚ್ಚಾಗಲಿದೆ. ನಂತರ ಇದು ಹೆಚ್ಚು ಹೆಚ್ಚು ಬಿರುಸುಗೊಳ್ಳುತ್ತಾ ಹೋಗಲಿದೆ. ಉತ್ತರ ಕರ್ನಾಟಕದ ಕರಾವಳಿ ತೀರ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರದಿಂದ ಇರುವಂತೆ ಐಎಂಡಿ ಎಚ್ಚರಿಕೆ ನೀಡಿದೆ.

ಕ್ಯಾರ್ ಚಂಡಮಾರುತ 190 ಕಿಮೀ ದೂರದ ಪಶ್ಚಿಮ ರತ್ನಗಿರಿ ಪ್ರದೇಶದಲ್ಲಿ ಕೇಂದ್ರಿಕೃತವಾಗಿದ್ದು, ಶುಕ್ರವಾರ ಸಂಜೆ ಮುಂಬೈನಿಂದ 330 ಕಿಮೀ ದೂರದ ಆಗ್ನೇಯ ಕರಾವಳಿ ಪ್ರದೇಶದತ್ತ ಹಾದು ಹೋಗಿತ್ತು. ಈ ಚಂಡಮಾರುತ ಮುಂದಿನ ಐದು ದಿನಗಳ ಕಾಲ ಒಮಾನ್ ಕರಾವಳಿಯತ್ತ ತಿರುಗುವ ಮೂಲಕ ಪಶ್ಚಿಮದತ್ತ ಮುಖಮಾಡಲಿದೆ ಎಂದು ವರದಿ ತಿಳಿಸಿದೆ.

Comments are closed.