ಕರ್ನಾಟಕ

ಹಿರಿಯ ಯೋಗಪಟು, ಮತ್ತು ಯೋಗ ಶಿಕ್ಷಕರಾದ ವಿ. ನಾನಮ್ಮಾಳ್ ವಿಧಿವಶ

Pinterest LinkedIn Tumblr

ಕೊಯಮತ್ತೂರು: ಯೋಗ ಶಿಕ್ಷಣದ ಮೂಲಕ ತಮಿಳುನಾಡಿನಲ್ಲಿ ನಾನಮ್ಮಾಳ್ ಮನೆಮಾತಾಗಿದ್ದಾರೆ ಆರೋಗ್ಯಯುತ ಜೀವನ ಶೈಲಿಗೆ ಯೋಗ ಮುಖ್ಯ ಎಂದು ಅವರು ಯುವಕರಿಗೆ ಯೋಗ ಕಲಿಸಿಕೊಡುತ್ತಿದ್ದರು. ಇವರು ಭಾರತದ ಹಿರಿಯ ಯೋಗಪಟು ಮತ್ತು ಯೋಗ ಶಿಕ್ಷಕರಾದರಾಗಿದ್ದರು.

ಕಳೆದ ಮೂವತ್ತು ದಿನಗಳಿಂದ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿದ್ದ ನಾನಮ್ಮಾಳ್   ಶನಿವಾರ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಅವರ ಪುತ್ರ ಬಾಲಕೃಷ್ಣನ್ ಮಾಹಿತಿ ನೀಡಿದ್ದಾರೆ.

ನಾನಮ್ಮಾಳ್ ಯೋಗ ಶಿಕ್ಷಣ ನೀಡುವ ಮೂಲಕ ಸದೃಢ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಅವರು ಜನಪ್ರಿಯ ಯೋಗಪಟುವಾಗಿದ್ದು ಯುಟ್ಯೂಬ್ ಚಾನೆಲ್ ಮೂಲಕ ತಮ್ಮದೇ ಆದ ರೀತಿಯಲ್ಲಿ ಯೋಗ ಪ್ರಚುರ ಪಡಿಸುತ್ತಿದ್ದರು.

ಈ ವರ್ಷ ಜನವರಿಯಲ್ಲಿ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು. ಸಾವಿರಾರು ಜನರಿಗೆ ಅವರು ಯೋಗವನ್ನು ಕಲಿಸಿಕೊಟ್ಟಿದ್ದಾರೆ.

Comments are closed.