ಕರ್ನಾಟಕ

ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಬಾಕ್ಸ್ ಸ್ಫೋಟ :ಬಾಕ್ಸ್ ತೆರೆದ ವ್ಯಕ್ತಿಯ ಕೈ ಕಟ್

Pinterest LinkedIn Tumblr

ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಪೋಟ ಸಂಭವಿಸಿದ್ದು, ಓರ್ವ ವ್ಯಕ್ತಿಯ ಕೈ ಕಟ್ ಆಗಿದೆ.ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಹೆಸರಿನಲ್ಲಿ ಬಾಕ್ಸ್ ಒಂದು ಬಂದಿತ್ತು. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಬಾಕ್ಸ್ ಸ್ಫೋಟಗೊಂಡಿದೆ ಎನ್ನಲಾಗಿತ್ತು, ಆದರೆ ಬಳಿಕ ಅದು ಖಾನಾಪುರ ಅಲ್ಲ ಕೊಲ್ಹಾಪುರ ಶಾಸಕರ ಹೆಸರಲ್ಲಿ ಬಂದಿದ್ದ ಬಾಕ್ಸ್ ಎಂದು ಹೇಳಲಾಗುತ್ತಿದೆ.

ಘಟನೆಯಲ್ಲಿ ಓರ್ವ ವ್ಯಕ್ತಿಯ ಕೈ ಕತ್ತರಿಸಿಹೋಗಿದೆ. ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಕಾರಣ, ಅದರಲ್ಲೇನಿದೆ ಎಂದು ಬಾಕ್ಸ್ ತೆರೆದಾಗ ಸ್ಫೋಟ ಸಂಭವಿಸಿದೆ. ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಿಡಲಾಗುತ್ತಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ, ಆರೋಪಿಗಳ ಹುಡುಕಾಟದಲ್ಲಿದ್ದಾರೆ. ಯಾವ ದ್ವೇಷಕ್ಕೆ ಈ ರೀತಿ ಮಾಡಿದ್ದಾರೆ ಎನ್ನುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬಾಕ್ಸ್‌ನಲ್ಲಿದ್ದ ಸ್ಫೋಟಕ ವಸ್ತು ಯಾವುದು ಎಂದು ಕಂಡುಹಿಡಿಯಲು ಸ್ಯಾಂಪಲ್‌ನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.

ಶೀಘ್ರವೇ ಮಾಹಿತಿ ಲಭ್ಯವಾಗಲಿದೆ. ಆದರೆ ಅಂಜಲಿ ನಿಂಬಾಳ್ಕರ್ ಅವರ ಹೆಸರಿನಲ್ಲಿ ಈ ಬಾಕ್ಸ್ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನೇನುಲಭ್ಯವಾಗಬೇಕಿದೆ.

ಹುಸೇನಬಾಬ ಮಕಾನವಾಲೆ. ರೈಲ್ವೆ ನಿಲ್ದಾಣದಲ್ಲಿ ಟಿಫಿನ್ ಮಾರಾಟ ಮಾಡುವ ವ್ಯಕ್ತಿ. ಅಮರಾವತಿ ಎಕ್ಸಪ್ರೇಸ್ ರೈಲಿನಲ್ಲಿದ್ದ ಬಾಕ್ಸನ ಆರ್ ಫಿಎಫ್ ಪೇದೆ ರೈಲಿನಿಂದ ಕೆಳೆಗಳಿಸಿ ಹುಸೇನಸಾಬಗೆ ಓಪನ್ ಮಾಡುವಂತೆ ಸೂಚಿಸಿದಾಗ ಸ್ಟೋಟವಾಗಿದೆ‌.

ನೋ ಬಿಜೆಪಿ, ನೋ ಕಾಂಗ್ರೆಸ್ ಒನಲೀ ಶಿವಸೇನಾ ಎಂದು ಸ್ಫೋಟಕವಿದ್ದ ಬಾಕ್ಸ್ ಮೇಲೆ ಬರೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಂದಿ ಹಿಡಿಯುವ ವೇಳೆ ಬಳಸುವ ಸ್ಫೋಟಕ ಇದು ಎಂದು ತಿಳಿದುಬಂದಿದೆ. ಮಹಾರಾಷ್ಟ್ರ ಎಲೆಕ್ಷನ್ ಗೆ ಸಂಬಂಧಿಸಿರಬಹುದು ಎನ್ನಲಾಗುತ್ತಿದೆ.

Comments are closed.