ಕರ್ನಾಟಕ

ನಿವೃತ್ತ ಕುಲಪತಿ ಅಯ್ಯಪ್ಪ ದೊರೆ ಹತ್ಯೆಯ ಸಂಚುಕೋರನ ಕಾಲಿಗೆ ಗುಂಡಿಟ್ಟು ಬಂಧಿಸಿದ ಪೊಲೀಸರು

Pinterest LinkedIn Tumblr


ಬೆಂಗಳೂರು: ಆಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರನಿಗೆ ಇಂದು ಪೊಲೀಸರು ಕಾಲಿಗೆ ಗುಂಡಿಟ್ಟು ಬಂಧಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಗಣೇಶ್ ಎಂಬಾತ ಪ್ರಮುಖ ಸಂಚುಕೋರ ಎಂದು ಹೇಳಲಾಗಿದ್ದು ಆತನನ್ನು ಬಂಧಿಸಲು ಪೋಲಿಸರು ಮುಂದಾಗಿದ್ದರು. ಆದರೇ ಆತ ಪ್ರತಿರೋಧ ಒಡ್ಡಿ ಪರಾರಿಯಾಗಲು ಯತ್ನಿಸಿದ್ದರಿಂದ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ಧಾರೆ.

ಮುನಿರೆಡ್ಡಿ ಪಾಳ್ಯದಲ್ಲಿ ಪಂಕ್ಚರ್ ಅಂಗಡಿ ಇಟ್ಟುಕೊಂಡಿದ್ದ ಗಣೇಶ್ ನಂತರ ಬ್ಯಾಟರಾಯನಪುರಕ್ಕೆ ಸ್ಥಳಾಂತರಿಸಿದ್ದ. ಈ ವೇಳೆ ಅಯ್ಯಪ್ಪ ದೊರೆ ಹತ್ಯೆಯ ಮತ್ತೊಬ್ಬ ಸಂಚುಕೋರ ಸೂರಜ್ ಶೆಟ್ಟಿಯೊಂದಿಗೆ ಗೆಳೆತನ ಬೆಳೆದಿತ್ತು. ಕೊಲೆಗೆ ಯೋಜನೆ ರೂಪಿಸಿಕೊಟ್ಟಿದ್ದು ಮಾತ್ರವಲ್ಲದೆ ಮಾರಾಕಾಸ್ತ್ರಗಳನ್ನು ಕೂಡ ಪೂರೈಸಿದ್ದ.ತದನಂತರದಲ್ಲಿ ಕೊಲೆಗಾರರ ಪಡೆ ಅಯ್ಯಪ್ಪ ಅವರ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದಿತ್ತು.

ಗಣೇಶ್ ಹೆಬ್ಬಾಳದ ಗೋಡೌನ್ ಒಂದರಲ್ಲಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಲು ಮುಂದಾಗಿದ್ದರು. ಆದರೇ ಆತ ಪ್ರತಿರೋಧ ಒಡ್ಡಿ ಹಲ್ಲೆ ಮಾಡಲು ಮುಂದಾಗಿದ್ದರಿಂದ ಕಾಲಿಗೆ ಗುಂಡು ಹಾರಿಸಿದ್ದಾರೆ.

Comments are closed.