ಕರ್ನಾಟಕ

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಪಿ ಮಾಡದಿರಲೆಂದು ವಿದ್ಯಾರ್ಥಿಗಳ ತಲೆಗೆ ರಟ್ಟಿನ ಬಾಕ್ಸ್​

Pinterest LinkedIn Tumblr


ಹಾವೇರಿ(ಅ.18) : ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಕಾಪಿ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ತಲೆಗೆ ರಟ್ಟಿನ ಬಾಕ್ಸ್​ ಹಾಕಿಸಿ, ಕಣ್ಣು ಮಾತ್ರ ಕಾಣಿಸುವಂತೆ ಕಿಂಡಿ ಬಿಟ್ಟು ಪರೀಕ್ಷೆ ಬರೆಸಿದ ಘಟನೆ ಹಾವೇರಿಯ ಭಗತ್ ಪಿಯುಸಿ ಕಾಲೇಜಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಅಕ್ಟೋಬರ್ 17 ರಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ನಡೆಯುತ್ತಿತ್ತು. ವಿದ್ಯಾರ್ಥಿಗಳು ಕಾಪಿ ಮಾಡಬಾರದು ಎಂಬ ಕಾರಣಕ್ಕೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಬಾಕ್ಸ್​ ಹಾಕಿಸಿತ್ತು. ಅವರೆಲ್ಲರೂ ಉಸಿರಾಡಲೂ ಕಷ್ಟಪಡುತ್ತ ಪರೀಕ್ಷೆ ಬರೆದಿದ್ದಾರೆ.

ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಮಯದಲ್ಲಿ ಅಕ್ಕಪಕ್ಕ ನೋಡುತ್ತಾರೆ ಎಂಬ ಕಾರಣಕ್ಕೆ ಆಡಳಿತ ಮಂಡಳಿ ಸಿಬ್ಬಂದಿಯೋರ್ವರು ಹೀಗೆ ಉಪಾಯ ಮಾಡಿದ್ದರಂತೆ. ಆದರೆ ಇದು ವಿದ್ಯಾರ್ಥಿಗಳ ಪಾಲಿಗೆ ನರಕವಾಗಿತ್ತು. ಸಾಹಸಪಟ್ಟು ಪ್ರಶ್ನೆ ಪತ್ರಿಕೆ ಓದಿಕೊಂಡು ಬರೆದಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಈ ಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಕಾರಣ ಕೇಳಿ ನೊಟೀಸ್ ನೀಡಿದ ಡಿಡಿಪಿಐ

ಆಡಳಿತ ಮಂಡಳಿಯವರು ವಾಟ್ಸಪ್​​​​ ಸ್ಟೇಟಸ್​​ ನೋಡಿ ಸ್ಥಳಕ್ಕೆ ಬಂದಿದ್ದ ಡಿಡಿಪಿಯು ಎಸ್.ಎಸ್. ಪೀರಾಜೆ ಆಡಳಿತ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.. ಒತ್ತಾಯ ಪೂರ್ವಕವಾಗಿ ತಲೆಗೆ ರಟ್ಟಿನ ಬಾಕ್ಸ್ ಹಾಕಿಸಿ ಪರೀಕ್ಷೆ ಬರೆಸಿದ್ದಾರೆ ಅಂತಾ ವಿದ್ಯಾರ್ಥಿಗಳು ಡಿಡಿಪಿಐ ಅವರಿಗೆ ಹೇಳಿದ್ದಾರೆ. ಈ ರೀತಿಯಲ್ಲಿ ಪರೀಕ್ಷೆ ಬರೆಸಿದ್ದಕ್ಕೆ ಆಡಳಿತ ಮಂಡಳಿಯವರಿಗೆ ಮೂರು ದಿನಗಳೊಳಗೆ ಲಿಖಿತ ಉತ್ತರ ನೀಡುವಂತೆ ನೊಟೀಸ್ ಜಾರಿಗೊಳಿಸಿದ್ದಾರೆ.

ಚನ್ನಾಗಿ ಓದಿ ನಾಲ್ಕು ಅಕ್ಷರ ಕಲಿರೊ ಅಂತಾ ತಲೆಗೆ ನಾಲ್ಕು ಬಿಗಿಯೊದು ಬಿಟ್ಟು ಯಾರಾದರೂ ತಲೆಮೇಲೆ ಡಬ್ಬಿ ಹಾಕುತ್ತಾರಾ ಅಂತಾ ಕಾಲೇಜು ಶಿಕ್ಷಕರಿಗೆ ಜನರು ಕಾಲೆಳೆಯುತ್ತಿದ್ದಾರೆ. ಪಾಪ ಹೊಸದಾಗಿ ಏನೊ ಮಾಡೊಕೆ ಹೋಗಿ ಶಿಕ್ಷಕರು ತಮ್ಮೊಳಗೆ ತಾವೆ ಇರುವೆ ಬಿಟ್ಟಿಕೊಂಡಿದಾರೆ.

Comments are closed.