ಮುಂಬೈ

ಹೃದಯಾಘಾತದಿಂದ ಮೃತಪಟ್ಟ ಪಿಎಂಸಿ ಬ್ಯಾಂಕ್​ನ 4ನೇ ಠೇವಣಿದಾರ

Pinterest LinkedIn Tumblr


ಮುಂಬೈ: ಬಿಕ್ಕಟ್ಟಿಗೆ ಸಿಲುಕಿಕೊಂಡಿರುವ ಪಂಜಾಬ್ ಮಹಾರಾಷ್ಟ್ರ ಸಹಕಾರ ಬ್ಯಾಂಕ್ (ಪಿಎಂಸಿ)ನ ಮತ್ತೊಬ್ಬ ಠೇವಣಿದಾರರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಒಟ್ಟು ನಾಲ್ವರು ಠೇವಣಿದಾರರು ಅಸುನೀಗಿದ್ದಾರೆ.

ಪಿಎಂಸಿ ಬ್ಯಾಂಕ್​ನ ಖಾತೆದಾರರಾದ ಮುರಳೀಧರ ಧರ ಅವರೇ ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಹಿರಿಯ ನಾಗರಿಕರಾಗಿರುವ ಮುರಳೀಧರ ಧರ ಅವರ ಚಿಕಿತ್ಸೆ ವೆಚ್ಚಕ್ಕಾಗಿ ಪಿಎಂಸಿ ಬ್ಯಾಂಕ್​ನಿಂದ ತಮ್ಮ ಹಣವನ್ನು ಹಿಂಪಡೆಯಲಾಗಿದೆ ಸಂಕಷ್ಟಕ್ಕೆ ತುತ್ತಾಗಿದ್ದರು ಎಂದು ಎಎನ್​ಐ ವರದಿ ಮಾಡಿದೆ.

51 ವರ್ಷದ ಜೆಟ್ ಏರ್​ವೇಸ್ ಸಂಸ್ಥೆಯ ಮಾಜಿ ಉದ್ಯೋಗಿಯಾಗಿರುವ ಸಂಜಯ್ ಗುಲಾಟಿ ಎಂಬುವವರು ಪಿಎಂಸಿ ಬ್ಯಾಂಕಲ್ಲಿ 90 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರು. ಹಣ ವಾಪಸ್​ ಸಿಗುವುದಿಲ್ಲ ಎಂದು ಭಯಭೀತಗೊಂಡಿದ್ದ ಗುಲಾಟಿ ಸೋಮವಾರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.

ಅದಾದ ಮರುದಿನವೇ ಫಟೋಮಲ್ ಪಂಜಾಬಿ ಎಂಬುವವರು ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಪಿಎಂಸಿ ಬ್ಯಾಂಕಿನಿಂದ ಹಣ ಹಿಂಪಡೆಯುವಿಕೆಗೆ ಆರ್​ಬಿಐ ಕಡಿವಾಣ ಹಾಕಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ಪಂಜಾಬಿ ಹೃದಯಾಘಾತಕ್ಕೆ ಒಳಗಾಗಿದ್ದರು.

ಮುಂಬೈನ 39 ವರ್ಷದ ವೈದ್ಯೆ ನಿವೇದಿತಾ ಬಿಜಲಾನಿ (39) ಎಂಬುವವರು ಕೂಡ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪಿಎಂಸಿ ಬ್ಯಾಂಕ್​ ಖಾತೆದಾರರಾಗಿರುವ ನಿವೇದಿತಾ ಅವರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಬ್ಯಾಂಕ್​ ಠೇವಣಿದಾರ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದ್ದಾರೆ.

ಅವ್ಯವಹಾರ ಹಗರಣಕ್ಕೆ ಸಿಲುಕಿರುವ ಪಿಎಂಸಿ ಬ್ಯಾಂಕ್ ಇದೀಗ ಭಾರೀ ನಷ್ಟದಲ್ಲಿದೆ. ಆರ್​ಬಿಐನ ನಿರ್ದೇಶನದ ಅಡಿಯಲ್ಲಿರುವ ಈ ಬ್ಯಾಂಕಲ್ಲಿ ಠೇವಣಿದಾರರು ಇಟ್ಟಿರುವ ಹಣದ ಮೊತ್ತ 11,000 ಕೋಟಿ ಇದೆ. ತಮ್ಮ ಹಣ ವಾಪಸ್ ನೀಡುವಂತೆ ಠೇವಣಿದಾರರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ಧಾರೆ.

Comments are closed.