ಕರ್ನಾಟಕ

5 ಲಕ್ಷಕ್ಕೆ ಪತಿಯನ್ನು ಆತನ ಪ್ರಿಯತಮೆಗೆ ಮಾರಾಟ ಮಾಡಿದ ಹೆಂಡತಿ… !

Pinterest LinkedIn Tumblr


ಮಂಡ್ಯ: ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಗಂಡನನ್ನೇ ಹೆಂಡತಿ 5 ಲಕ್ಷ ರೂಪಾಯಿಗೆ ಗಂಡನ ಪ್ರಿಯತಮೆಗೆ ಮಾರಿದ ವಿಚಿತ್ರ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ವಿವರ :
ರಮ್ಯ ಎಂಬುವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಪತ್ನಿ ಕೈಗೆ ಸಿಕ್ಕಿ ಬಿದ್ದಿದ್ದ. ಈ ವೇಳೆ ಪತ್ನಿ ಮತ್ತು ಪ್ರಿಯತಮೆಯ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ‌ ನಡೆದು ನ್ಯಾಯ ತೀರ್ಮಾನಕ್ಕಾಗಿ ವಿಷಯ ಪಂಚಾಯ್ತಿ ಕಟ್ಟೆಗೆ ಬಂದಿತ್ತು.

ಪಂಚಾಯಿತಿಯಲ್ಲಿ ವಾದ ಪ್ರತಿವಾದಗಳು ನಡೆದವು ಕೊನೆಯಲ್ಲಿ ಪ್ರಿಯತಮೆ ಹೇಳಿಕೆ ಪ್ರಕಾರ ನಿನ್ನ ಗಂಡ ನನ್ನ ಬಳಿ 5 ಲಕ್ಷ ರೂ ಸಾಲ ಪಡೆದಿದ್ದಾನೆ ಅದನ್ನ ತೀರಿಸಿ ನಿನ್ನ ಗಂಡನನ್ನು ಕರೆದುಕೊಂಡು ಹೋಗು ಎಂದು ಸಂಬಂಧ ಇಟ್ಟು ಕೊಂಡಿದ್ದ ಮಹಿಳೆ ಪಂಚಾಯ್ತಿಯಲ್ಲಿ ಬೇಡಿಕೆ ಇಟ್ಟಿದ್ದಾಳೆ. ಇದನ್ನ ಕೇಳಿದ ಪತ್ನಿ ಇಂತಹ ಗಂಡ ನನಗೆ ಬೇಕಿಲ್ಲ, ಪೊಲೀಸ್ ಸ್ಟೇಷನ್ ಗೆ ಹೋಗಿ ಕೇಸ್ ಹಾಕ್ತಿನಿ ನಿಮ್ಮನ್ನು ಕೋರ್ಟ್ ಕಚೇರಿ ಅಲೆಸ್ತಿನಿ ಎಂದು ವಾದ ಮಾಡಿದ್ದಾಳೆ.

ಕಡೆಗೆ ಜೀವನಾಂಶಕ್ಕಾಗಿ ಪತ್ನಿ ಪತಿಗೆ 5 ಲಕ್ಷ ರೂ ಬೇಡಿಕೆ ಇಟ್ಟಿದ್ದಾಳೆ. ಇಟ್ಟು ಕೊಂಡವಳು 5 ಲಕ್ಷ ನಾನೇ ಕೊಡ್ತಿನಿ ಗಂಡನನ್ನು ಬಿಡುವಂತೆ ಪತ್ನಿಗೆ ಷರತ್ತು ಹಾಕಿದ್ದಾಳೆ. ಷರತ್ತಿಗೆ ಒಪ್ಪಿದ ಪತ್ನಿ ಮುಂದಿನ ತಿಂಗಳು‌ ಹಣ ಕೊಟ್ಟು ಗಂಡನನ್ನು‌ ಖರೀದಿಸುವಂತೆ ಸೂಚಿಸಿದ್ದಾಳೆ. ಹಣ ಕೊಟ್ಟ ವೇಳೆ ತಾಳಿ ಬಿಚ್ಚಿಟ್ಟು ಒಪ್ಪಂದ ಪತ್ರಕ್ಕೆ ಸಹಿ ಹಾಕಲು ಹೆಂಡತಿಯೂ ಒಪ್ಪಿಗೆ ನೀಡಿರುತ್ತಾಳೆ.

ರಾಜಿ ಪಂಚಾಯ್ತಿಯಲ್ಲಾದ ಮಹಿಳೆಯರಿಬ್ಬರ ಹಣದ ನ್ಯಾಯ ತೀರ್ಮಾನವನ್ನು ಕಂಡ ಗ್ರಾಮಸ್ಥರು ದಂಗಾಗಿದ್ದಾರೆ.

Comments are closed.