ಕರ್ನಾಟಕ

ಸಾಯುವವರೆಗೂ ನಾನೇ ಶಾಸಕನಾಗಿರುತ್ತೇನೆ: ಉಮೇಶ ಕತ್ತಿ

Pinterest LinkedIn Tumblr


ಬೆಳಗಾವಿ: ಇನ್ನೂ 10 ವರ್ಷ ಶಾಸಕನಾಗಿ ಕೆಲಸ ಮಾಡುತ್ತೇನೆ. ಸಾಯೋವರೆಗೂ ನಾನೇ ಶಾಸಕನಾಗಿ ಇರುತ್ತೇನೆ. ಇನ್ನೂ 17 ಸ್ಥಾನಗಳು ಬಾಕಿ ಇವೆ ನಾನೇಕೆ ನಿರಾಶೆಯಾಗಲಿ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಹೇಳಿದರು.

ನಗರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 24ನೇ ವಯಸ್ಸಿನಲ್ಲಿ ನಾನು ಶಾಸಕನಾಗಿ ಆಯ್ಕೆ ಆಗಿದ್ದೇನೆ.‌ಸತತ ಗೆಲುವು ಸಾಧಿಸಿದ್ದೇನೆ.‌ಇನ್ನು ಮುಂದೆ ೧೦ ವರ್ಷಗಳ ಕಾಲ ನಾನೇ ಶಾಸಕನಾಗಿ ಇರುತ್ತೇನೆ ಎಂದರು.

ಅನುದಾನದ ವಿಚಾರಕ್ಕೆ ಶಾಸಕ ಆತ್ಮಹತ್ಯೆ ಮಾಡಿಕೊಳ್ಳುವ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ಯಾವುದೇ ಕಾರಣಕ್ಕೂ ಆತ್ಮಹತ್ಯೆ ನಿರ್ಧಾರ ಮಾಡಲ್ಲ. ಬೇಕಾದರೆ ಯಾರನ್ನಾದರೂ ಆತ್ಮಹತ್ಯೆ ಮಾಡಿಸುತ್ತೇನೆ ಎಂದರು.

ಸಚಿವನಾಗಲು ಹಣೆಬರಹ ಸರಿ ಇರಬೇಕು
ಹಣಬರಹ ಸರಿ ಇದ್ದರೆ ಸಚಿವನಾಗುತ್ತೇನೆ. ಲಕ್ಷ್ಮಣ ಸವದಿ ನನ್ನ ಮಿತ್ರ. ಅವನು ಮಂತ್ರಿ ಆಗಿದ್ದು ಸ್ವಾಗತ‌. ಡಿಸೆಂಬರ್ ನಂತರ ಹಣೆಬರಹ ಬದಲಾವಣೆ ಆಗಬಹುದು. ನಾನು ಜ್ಯೋತಿಷ್ಯ, ಭವಿಷ್ಯ ನಂಬಲ್ಲ, ಹಣೆ ಬರಹ ಚೆನ್ನಾಗಿದ್ದರೆ ಯಾರು ಬೇಕಾದರೂ ಉಪಮುಖ್ಯಮಂತ್ರಿ ಆಗಬಹುದು ಎಂಬ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಗೆ ವ್ಯಂಗ್ಯವಾಡಿದರು.

ಅತೃಪ್ತರಿಗೆ ಟಿಕೆಟ್ ನೀಡುವ ವಿಚಾರ ಹೈಕಮಾಂಡ್ ಬಿಟ್ಟಿದ್ದು. ಹಿಂದೆ ಬಿಜೆಪಿ ಹಿರಿಯ ನಾಯಕನಾಗಿದ್ದೇ ಈಗ ಇಲ್ಲ. ಯಡಿಯೂರಪ್ಪ ಬೆಳಗಾವಿ ಬಂದಿರೋದು ಸ್ವಾಗತ. ಇನ್ನೂ ಹೆಚ್ಚಿನ ಪರಿಹಾರ ಕಾರ್ಯ ನಡೆಯಬೇಕು.
ಈ ಹಿಂದೆ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ. ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ, ನಾನು ಮಾಡುವ ಕೆಲಸದ ಮೇಲೆ ನಂಬಿಕೆ ಇದೆ.
ಯಡಿಯೂರಪ್ಪ ಫೋನ್ ಕರೆ ಬಂದಿದ್ದಕ್ಕೆ ಹುಕ್ಕೇರಿಗೆ ಹೋಗುವುದನ್ನು ಬಿಟ್ಟು ಭೇಟಿ ಆಗಿದ್ದೇನೆ.

ಯಡಿಯೂರಪ್ಪ ಜತೆಗೆ ಯಾವುದೇ ಅಸಮಾಧಾನ ಇಲ್ಲ. ಯಡಿಯೂರಪ್ಪರಿಂದ ನಾನು ದೂರವಿಲ್ಲ. ಯಡಿಯೂರಪ್ಪ ನಮ್ಮ ನಾಯಕ. ನನಗೆ ಯಾವುದೇ ಸಚಿವ ಸ್ಥಾನ ಬೇಕಿಲ್ಲ. ಪಕ್ಷದ ನಾಯಕತ್ವದ ತೀರ್ಮಾನಕ್ಕೆ ಬದ್ದ. ನನ್ನ ಮತ್ತು ಯಡಿಯೂರಪ್ಪ, ಹೈಮಾಂಡ್ ನಡುವೆ ಯಾವುದೇ ಭಿನ್ನಮತ ಇಲ್ಲ ಎಂದರು.

Comments are closed.