ಕರ್ನಾಟಕ

ದುಡ್ಡು ಉಳಿತಾಯಕ್ಕೆ ಪೋಸ್ಟ್ ಆಫೀಸ್ ಹೊಸ ಆಫರ್

Pinterest LinkedIn Tumblr


ಸ್ನೇಹಿತರೆ ಇವತ್ತಿನ ದಿನಗಳಲ್ಲಿ ಎಷ್ಟು ಸಂಪಾದಿಸಿದರು ಕೂಡ ತಿಂಗಳ ಕೊನೆಯಲ್ಲಿ ಒಂದು ನಯಾ ಪೈಸೆ ಕೂಡ ಉಳಿಯುವುದಿಲ್ಲ ಆದ್ದರಿಂದ ಪ್ರತಿ ತಿಂಗಳು ಸ್ವಲ್ಪ ಹಣವನ್ನಾದರು ಉಳಿತಾಯ ಮಾಡುತ್ತಾ ಹೋದರೆ ಮುಂದಿನ ನಮ್ಮ ಕಷ್ಟದ ದಿನಗಳಲ್ಲಿ ಈ ಹಣವೇ ನಮಗೆ ಆಧಾರ ಆಗುತ್ತದೆ ಹಾಗಾಗಿ ಇದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಪಡಿಯೋಣ. ನಾವು ನಿಮಗೆ ಪೋಸ್ಟ್ ಆಫೀಸ್ ನ ಡೆಪಾಸಿಟ್ ಬಗ್ಗೆ ಮಾಹಿತಿ ತಿಳಿಸುತ್ತೇವೆ. ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆ ಹೇಗೆ ಪಡೆಯುವುದು ಮತ್ತು ಅದನ್ನು ಪಡೆಯಲು ಯಾವ ಅವಶ್ಯ ದಾಖಲೆಗಳು ಬೇಕು ಎಂಬುದರ ಬಗ್ಗೆ ತಿಳಿಯೋಣ. ಈ ಹೊಸ ಪೋಸ್ಟ್ ಆಫೀಸ್ ಖಾತೆ ತೆರೆಯಲು ಯಾವುದೇ ರೀತಿಯ ವಯಸ್ಸಿನ ಮಿತಿ ಇರುವುದಿಲ್ಲ.

ಪಾಲಕರು ತಮ್ಮ ಮಕ್ಕಳ ಹೆಸರಿನಲ್ಲಿ ಕೂಡ ಈ ಖಾತೆ ತೆರೆಯಬಹುದು ಹಾಗೂ ಇದರಲ್ಲಿ ಮಾಸಿಕ ಕನಿಷ್ಟ ಠೇವಣಿ 10 ರೂಪಾಯಿ ಆಗಿದ್ದು ಗರಿಷ್ಟ ಠೇವಣಿಯ ಯಾವುದೇ ಮಿತಿ ಇರುವುದಿಲ್ಲ. ಈ ಒಂದು ನೂತನ ಆಫಾರ್ ಖಾತೆಯನ್ನು 10 ರೂಪಾಯಿ ಯಿಂದ ಆರಂಭಿಸಿ ನಿಮಗೆ ಸಾಧ್ಯ ಆದಷ್ಟು ದಿನ ಪ್ರತಿ ತಿಂಗಳು ಜಮಾ ಮಾಡಬಹುದಾಗಿದೆ. ಸ್ನೇಹಿತರೆ ಇದರ ಕಾಲಾವಧಿಯು 5 ವರ್ಷ ಇರಲಿದೆ ನೀವು ಇಚ್ಛಿಸಿದಲ್ಲಿ ಇನ್ನು 5 ವರ್ಷಗಳ ಕಾಲ ಮುಂದುವರೆಸಬಹುದು. ಈ ಖಾತೆಯಲ್ಲಿ ನೀವು ಎಷ್ಟು ಖಾತೆ ಬೇಕಾದರೂ ತೆರೆಯಬಹುದು, ಈ ಆರ್ ಡಿ ಖಾತೆಯನ್ನು ತಿಂಗಳಿನ 1 ನೆಯ ತಾರೀಖು ನಿಂದಾ 15 ನೆಯ ತಾರೀಖಿನ ಒಳಗಡೆ ಪಡೆದರೆ ಇದರ ಕಂತನ್ನು 15 ನೆಯ ತಾರೀಖಿನ ಒಳಗಡೆ ಪಾವತಿಸಬೇಕು ಹಾಗೂ 16 ನೆಯ 30 ತಾರೀಖಿನ ಒಳಗಡೆ ಪಡೆದರೆ ಇದರ ಒಳಗಡೆಯೇ ನಿಮ್ಮ ತಿಂಗಳ ಕಂತನ್ನು ಪಾವತಿಸಬೇಕು.

ಈ ಆರ್ ಡಿ ಅಕೌಂಟ್ ನಲ್ಲಿ ಪ್ರತಿ ತಿಂಗಳು ಕಟ್ಟುವ ಕಂತಿನಲ್ಲಿ ತಡವಾದರೆ ನಿಮಗೆ ಮುಂದಿನ ತಿಂಗಳು ಕಟ್ಟುವ ವೇಳೆಯಲ್ಲಿ ದಂಡವನ್ನು ಹಾಕಿ ಕಂತನ್ನು ತುಂಬಿಸಿ ಕೊಳ್ಳುತ್ತಾರೆ ಹಾಗೂ ಸತತವಾಗಿ 4 ತಿಂಗಳು ಕಂತನ್ನು ಕಟ್ಟಿಲ್ಲ ಎಂದರೆ ಇನ್ನು 2 ತಿಂಗಳುಗಳ ಕಾಲ ಕಾಲಾವಕಾಶ ನೀಡಿ ನಿಮ್ಮ ಖಾತೆಯನ್ನು ಮುಚ್ಚಿ ನೀವು ಪಡೆದ ಹಣವನ್ನು ಪೋಸ್ಟ್ ಆಫೀಸ್ ನಲ್ಲಿ ಕೊಡುತ್ತಾರೆ. ಇನ್ನು ವಿತ್ ಡ್ರಾ ಬಗ್ಗೆ ಹೇಳುವುದಾದರೆ ನೀವು 5 ವರ್ಷಗಳ ಕಾಲ ಆರ್ ಡಿ ಪಡೆದಿದ್ದೀರಿ ಎಂದುಕೊಳ್ಳಿ ಇದರ ಒಳಗಡೆ ನಿಮಗೆ ಹಣದ ಕೊರತೆ ಉಂಟಾದಲ್ಲಿ ನೀವು ಕಟ್ಟಿದ ಆರ್ ಡಿ ಒಂದು ವರ್ಷ ಪೂರ್ಣಗೊಂಡರೆ ನಿಮಗೆ ಶೇಕಡಾ 50 ರಷ್ಟು ವಿತ್ ಡ್ರಾ ಅನ್ನು ನಿಮ್ಮ ಆರ್ ಡಿ ಯಿಂದ ಪಡೆಯಬಹುದು ಸ್ನೇಹಿತರೆ ಪೋಸ್ಟ್ ಆಫೀಸಿನಲ್ಲಿ ಜುಲೈ 2019 ರಿಂದ ಉತ್ತಮ ಬಡ್ಡಿ ನೀಡುತ್ತಾ ಇದೆ.

ನೀವು ಯಾವುದೊ ಚಿಟ್ ಫಂಡ್ ನಲ್ಲಿ ಅಥವ ಮತ್ತೆ ಯಾವುದೋ ಚೀಟಿ ಹಾಕಿ ಹಣ ಕಳೆದುಕೊಳ್ಳುವ ಬದಲು ಕೇಂದ್ರ ಸರ್ಕಾರದ ಹಿಡಿತದಲ್ಲಿ ಇರುವ ಈ ಪೋಸ್ಟ್ ಆಫೀಸ್ ನಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯಿರಿ ನಿಮ್ಮ ಹಣಕ್ಕೂ ಹೆಚ್ಚಿನ ಭದ್ರತೆ ಸಿಗಲಿದೆ. ಒಂದು ಲಕ್ಷದ ಒಳಗೆ ಹೂಡಿಕೆ ಮಾಡುವ ಹಣಕ್ಕೆ ವಿಮೆ ಕೂಡ ಇರುವುದರಿಂದ ನೀವು ಚಿಂತೆ ಮಾಡುವ ಅಗತ್ಯ ಇರೋದಿಲ್ಲ. ಈ ಲೇಖನ ಎಲ್ಲರಿಗು ತಲುಪಲಿ ಶೇರ್ ಮಾಡಿರಿ.

Comments are closed.