ಮನೋರಂಜನೆ

ಎನ್‍ಆರ್‍ಐ ಉದ್ಯಮಿಯಾದ ಪತಿಯ ಫೋಟೋ ರಿವೀಲ್ ಮಾಡಿದ ರಾಖಿ ಸಾವಂತ್

Pinterest LinkedIn Tumblr


ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ತಮ್ಮ ಟ್ವಿಸ್ಟ್‌ನೊಂದಿಗೆ ತಮ್ಮ ಪತಿಯ ಫೋಟೋವನ್ನು ರಿವೀಲ್ ಮಾಡಿದ್ದಾರೆ.

ರಾಖಿ ಸಾವಂತ್ ತಾವು ಗೌಪ್ಯವಾಗಿ ಎನ್‍ಆರ್‍ಐ ಉದ್ಯಮಿಯನ್ನು ಮದುವೆಯಾಗಿದ್ದಾರೆ ಎಂದು ಹೇಳಿದ್ದರು. ಆದರೆ ತಮ್ಮ ಪತಿಯ ಫೋಟೋವನ್ನು ಅವರು ರಿವೀಲ್ ಮಾಡಿರಲಿಲ್ಲ. ಈಗ ಅವರು 9 ಪುರುಷರ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ನನ್ನ ಪತಿಯನ್ನು ಗುರುತಿಸಿ ಎಂದು ಹೇಳಿದ್ದಾರೆ.

ಫೋಟೋ ಜೊತೆ ರಾಖಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ “ನನ್ನ ಪತಿಯನ್ನು ನೋಡಲು ನೀವೆಲ್ಲಾ ಕಾತುರದಿಂದ ಕಾಯುತ್ತಿದ್ದೀರಾ ಎಂದು ಗೊತ್ತು. ನಾನು ಈ ವಿಡಿಯೋ ಜೊತೆ ಕೆಲವೊಂದು ಫೋಟೋಗಳನ್ನು ಪೋಸ್ಟ್ ಮಾಡಿದ್ದೇನೆ. ಆ ಫೋಟೋ ನೋಡಿ ನನ್ನ ಪತಿ ಯಾರೆಂದು ಗೆಸ್ ಮಾಡಿ” ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ರಾಖಿ ತಮ್ಮ ಪತಿ ಯಾರೆಂಬುದನ್ನು ರಿವೀಲ್ ಮಾಡಲೇ ಇಲ್ಲ. ಆದರೆ ಆ ಒಂಬತ್ತು ಪುರುಷರ ಫೋಟೋದಲ್ಲಿ ನನ್ನ ಪತಿ ಕೂಡ ಇದ್ದಾರೆ. ನೀವೇ ನನ್ನ ಪತಿ ಯಾರೆಂದು ಗೆಸ್ ಮಾಡಿ ಎಂದು ತಮ್ಮ ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ್ದಾರೆ.

ಕೆಲವು ದಿನಗಳ ಹಿಂದೆ ರಾಖಿ ಸಾವಂತ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಪ್ರಶ್ನಿಸಲಾಗಿತ್ತು. ಆಗ ರಾಖಿ ಸಾವಂತ್ ಅವರು, “ನಾನು 2020ರವರೆಗೂ ಮಗುವಿನ ಪ್ಲಾನಿಂಗ್ ಮಾಡುತ್ತೇನೆ. ನನ್ನ ಪತಿ ರಿತೇಶ್ ಮಗುವಿನೊಂದಿಗೆ ಎಲ್ಲರ ಮುಂದೆ ಬರುತ್ತಾರೆ” ಎಂದು ಉತ್ತರಿಸಿದ್ದಾರೆ.

ಇದೇ ವೇಳೆ ನಿಮ್ಮ ಪತಿಯನ್ನು ಪರಿಚಯ ಮಾಡಿಸುವುದಿಲ್ಲವೇ ಎಂದು ಕೇಳಿದ್ದಾಗ, “ನಾನು ನನ್ನ ಪತಿ ಜೊತೆ ಬಿಗ್ ಬಾಸ್ 13 ಸೀಸನ್‍ನಲ್ಲಿ ಭಾಗವಹಿಸುತ್ತಿದ್ದೇವೆ. ಅಲ್ಲಿಯೇ ಎಲ್ಲರಿಗೂ ನನ್ನ ಪತಿಯನ್ನು ಪರಿಚಯ ಮಾಡಿಸುತ್ತೇನೆ” ಎಂದು ಹೇಳಿದ್ದರು.

Comments are closed.