ಕರ್ನಾಟಕ

ಮಹಿಷ ದಸರಾ ನಡೆಸದಿರಲು ಪ್ರತಾಪ್ ಸಿಂಹ ಆಗ್ರಹ

Pinterest LinkedIn Tumblr


ಮೈಸೂರು: ಇನ್ನೇನು ಕೆಲ ದಿನಗಳಲ್ಲೇ ನವರಾತ್ರಿ ಸಂಭ್ರಮ ಶುರುವಾಗಲಿದೆ. ಅದರಲ್ಲೂ ವಿಶ್ವವಿಖ್ಯಾತಿ ಪಡೆದಿರುವ ಮೈಸೂರು ದಸರಾಗೆ ಭರದಿಂದಲೇ ತಯಾರಿ ನಡೆದಿದೆ. ಆದ್ರೆ ದಸರಾ ಹೊಸ್ತಿಲಲ್ಲಿ ಸೈದ್ಧಾಂತಿಕ ಸಮರ ಶುರುವಾಗಿದೆ. ಮಹಿಷ ದಸರಾ ನಡೆಸದಿರಲು ಪ್ರತಾಪ್ ಸಿಂಹ ಆಗ್ರಹಿಸಿದ್ದು, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಮಹೀಷ ದಸರಾ ನಡೆಸಲು ಸ್ಟೇಜ್ ನಿರ್ಮಿಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪ್ರತಾಪ್ ಸಿಂಹ, ಸ್ಟೇಜ್ ನಿರ್ಮಿಸೋಕ್ಕೆ, ಮಹೀಷ ದಸರಾ ಮಾಡೋಕ್ಕೆ ಯಾರ ಬಳಿ ಪರ್ಮಿಷನ್ ತೊಕೊಂಡ್ರಿ ಎಂದು ಸಿಟ್ಟಾಗಿದ್ದರು. ಈ ವೇಳೆ ಪ್ರತಾಪ್ ಸಿಂಹ ಸ್ಥಳಕ್ಕೆ ಬಂದ ಪೋಲಿಸರನ್ನ ನಿಂದಿಸಿದ್ದಾರೆ.

ಪೊಲೀಸ್ ಡಿಪಾರ್ಟ್‌ಮೆಂಟ್‌ನಿಂದ ಇಂಥಾ ಷಂಡತನ ನಿರೀಕ್ಷೆ ಮಾಡಿರಲಿಲ್ಲ ಎಂದು ಪೊಲೀಸ್ ಕಮಿಷನರ್ ಮತ್ತು ಡಿಸಿಪಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ. ಮಹಿಷಾಸುರ ಮೂರ್ತಿ ಬಳಿ ಶಾಮಿಯಾನ ಹಾಕಿದ್ದಕ್ಕೆ ಸಿಟ್ಟಾದ ಸಂಸದ ಪ್ರತಾಪ್ ಸಿಂಹ, ಶಾಮಿಯಾನ ಹಾಕಲು ಯಾರು ಅನುಮತಿ ಕೊಟ್ಟಿದ್ದು ಎಂದು ಕಿಡಿಕಾರಿದ್ದಾರೆ.

ಈ ವೇಳೆ ಮಾತನಾಡಿದ ಪೊಲೀಸ್ ಆಯುಕ್ತರು, ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಗ್ರಾಮ ಪಂಚಾಯಿತಿ ವ್ಯಾಪ್ತಿ ಎಂದಿದ್ದಾರೆ. ಅಲ್ಲದೇ, ಗ್ರಾಮಪಂಚಾಯಿತಿ ಸಿಬ್ಬಂದಿ, ನಾವು ಶಾಮಿಯಾನ ಹಾಕಲು, ಮಹೀಷ ದಸರಾ ಮಾಡಲು ಅನುಮತಿ ನೀಡಿಲ್ಲವೆಂದು ಹೇಳಿದ್ದಾರೆ.

ಮಹಿಷನಿಗೆ ಹುಟ್ಟಿರುವವನು ಅವನ ಮನೆಯಲ್ಲಿ ಕಾರ್ಯಕ್ರಮ ಮಾಡಿಕೊಳ್ಳಲಿ. ಕೂಡಲೇ ಟ್ರಕ್ ತಂದು ತೆರುವುಗೊಳಿಸಬೇಕು. ಇಲ್ಲವಾದರೆ ಅರಮನೆ ಆವರಣದಿಂದ ನಿನ್ನ ಓಡಿಸ್ತಿನೆಂದು ಶಾಮಿಯಾನ ಮಾಲೀಕರಿಗೆ ಸಂಸದ ಪ್ರತಾಪ್ ಸಿಂಹ ಅವಾಜ್ ಹಾಕಿದ್ದಾರೆ.

Comments are closed.