ಅಂತರಾಷ್ಟ್ರೀಯ

ಪ್ರಿಯತಮನ ಮರ್ಮಾಂಗ ಕತ್ತರಿಸಿದ ಯುವತಿಗೆ 13 ವರ್ಷ ಜೈಲು ಶಿಕ್ಷೆ

Pinterest LinkedIn Tumblr


ಕಾರ್ಡೊಬಾ: ತಮ್ಮ ಸೆಕ್ಸ್ ವಿಡಿಯೋವನ್ನು ಸ್ನೇಹಿತರ ಜೊತೆ ಶೇರ್ ಮಾಡಿಕೊಂಡಿದ್ದಕ್ಕೆ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ್ದ 28 ವರ್ಷದ ಯುವತಿಗೆ ಅರ್ಜೆಂಟೀನಾದ ಕಾರ್ಡೊಬಾ ಕೋರ್ಟ್ 13 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

2017ರ ನವೆಂಬರ್​ 25ರಂದು ಬ್ರೆಂಡಾ ಬಾರ್ಟಿನಿ ಎಂಬ ಯುವತಿ ತನ್ನ ಪ್ರಿಯತಮನ ಮರ್ಮಾಂಗವನ್ನು ಕತ್ತರಿಸಿದ್ದಳು. ಪ್ರಕರಣದ ವಿಚಾರಣೆ ನಡೆಸಿದ ಕಾರ್ಡೊಬಾ ಕೋರ್ಟ್ ಅಪರಾಧಿಗೆ ಬರೊಬ್ಬರಿ 13 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬಾರ್ಟಿನಿ ತನ್ನ ಪ್ರಿಯತಮ ಸೆರಿಗೋ ಫರ್ನಾಂಡೀಸ್​(45) ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ, ಆತನ ಮುಖವನ್ನು ವೆಲ್ವೆಟ್​ ಬಟ್ಟೆಯಿಂದ ಮುಚ್ಚಿ, ಗುಪ್ತಾಂಗವನ್ನು ಕತ್ತರಿಸಿದ್ದಳು. ಈ ಬಗ್ಗೆ ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಿದ ಬಾರ್ಟಿನಿ, ಆತನನ್ನು ಕೊಲ್ಲುವುದು ನನ್ನ ಉದ್ದೇಶ ಆಗಿರಲಿಲ್ಲ ಎಂದಿದ್ದಾಳೆ. ಹಾಗೇ ಹಲ್ಲೆ ನಡೆಸಲು ಕಾರಣವನ್ನೂ ಬಿಚ್ಚಿಟ್ಟಿದ್ದಾಳೆ.

ನಾನು ಅತನೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋಗಳು, ಫೋಟೋಗಳನ್ನು ಸ್ನೇಹಿತರಿಗೆ ಶೇರ್​ ಮಾಡಿದ್ದ. ಅಲ್ಲದೆ, ನಾಲ್ಕು ಜನ ಪುರುಷರು, ನಾಲ್ವರು ಮಹಿಳೆಯರ ಎದುರು ವಿಡಿಯೋವನ್ನು ತೋರಿಸಿ ವಿಕೃತಿ ಮೆರೆದಿದ್ದ. ಇದರಿಂದಾಗಿ ನನ್ನ ಜೀವನ ಹಾಳಾಗಿತ್ತು. ವೃತ್ತಿಗೆ ಕುತ್ತು ಬಂದಿತ್ತು. ಅಲ್ಲದೆ ಖಾಸಗಿತನಕ್ಕೆ, ಗೌರವಕ್ಕೆ ಧಕ್ಕೆಯಾಗಿದೆ. ಹಾಗಾಗಿ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದೆ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾಳೆ.

ಹಲ್ಲೆಗೊಳಗಾದ ಸೆರಿಗೋ ಫರ್ನಾಂಡೀಸ್​ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ಆಕೆ ಮೊದಲು ನನ್ನ ಕಣ್ಣಿಗೆ ಬಟ್ಟೆ ಕಟ್ಟಿದಳು. ಬಳಿಕ ಉದ್ರೇಕಕಾರಿಯಾಗಿ ಮಾತನಾಡುತ್ತಾ ನನ್ನನ್ನು ಕಟ್ಟಿ ಹಾಕಲೂ ಪ್ರಯತ್ನಿಸಿದಳು. ಆದರೆ ಅದಕ್ಕೆ ನಾನು ಅವಕಾಶ ಕೊಡಲಿಲ್ಲ. ಕೊನೆಯಲ್ಲಿ ನನ್ನ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿ ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ.

Comments are closed.