ಕರ್ನಾಟಕ

ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ತಿಂಗಳಲ್ಲಿ ಹರಿದುಬಂತು 137 ಕೋಟಿ ದೇಣಿಗೆ!

Pinterest LinkedIn Tumblr


ಬೆಂಗಳೂರು: ರಾಜ್ಯದ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಿರುವ ನಾಡಿನ ಜನತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸ್ವಯಂ ಸ್ಫೂರ್ತಿಯಿಂದ ದೇಣಿಗೆ ನೀಡುತ್ತಿದ್ದಾರೆ. ನೆರೆ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ತಿಂಗಳಲ್ಲಿ 137.32 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಗೆ ಆಗಸ್ಟ್ 9 ರಿಂದ ಸೆಪ್ಟೆಂಬರ್ 18 ರವರೆಗೆ 137.32 ಕೋಟಿ ರೂ. ದೇಣಿಗೆ ಜಮಾ ಆಗಿದೆ. ವಿವಿಧ ಸಂಘ, ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ನೌಕರರು, ವಿವಿಧ ನಿಗಮ-ಮಂಡಳಿಗಳ ನೌಕರರು ಉದಾರವಾಗಿ ದೇಣಿಗೆ ನೀಡಿದ್ದಾರೆ.

ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 25 ಕೋಟಿ ರೂ., ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಅಧ್ಯಕ್ಷೆ ಸುಧಾ ಮೂರ್ತಿ ಅವರು 10 ಕೋಟಿ ರೂ. ದೇಣಿಗೆ ನೀಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಅಂತೆಯೇ ಎನ್ಎಂಡಿಸಿ 10 ಕೋಟಿ ರೂ. , ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 5 ಕೋಟಿ ರೂ. ದೇಣಿಗೆ ನೀಡಿದೆ.

ರಾಜ್ಯ ಸರ್ಕಾರಿ ನೌಕರರ ಸಂಘ, ನಿವೃತ್ತ ನೌಕರರ ಸಂಘಗಳು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಒಂದು ದಿನದ ವೇತನ ನೀಡುವುದಾಗಿ ವಾಗ್ದಾನ ಮಾಡಿವೆ. ನಿಗಮ, ಮಂಡಳಿಗಳು ಸಹ ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡಿವೆ.

ಉದ್ಯಮಿಗಳು, ಸೇವಾ ಸಂಸ್ಥೆಗಳು, ಸಾರ್ವಜನಿಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರ ನೆರವಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ದೇಣಿಗೆ ನೀಡ ಬಯಸುವವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಈ ಕೆಳಕಂಡ ಬ್ಯಾಂಕ್ ಖಾತೆಗಳಿಗೆ ಆನ್​ಲೈನ್​ನಲ್ಲೂ ದೇಣಿಗೆ ಜಮಾ ಮಾಡಬಹುದು. ಅಥವಾ ಚೆಕ್, ಡಿಡಿ ಮೂಲಕವೂ ದೇಣಿಗೆ ನೀಡಬಹುದು.

ಸಿಎಂ ಪರಿಹಾರ ನಿಧಿ (ಪ್ರಾಕೃತಿಕ ವಿಕೋಫ)

ಬ್ಯಾಂಕ್​- ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ

ಬ್ರಾಂಚ್- ವಿಧಾನಸೌಧ

ಖಾತೆ ಸಂಖ್ಯೆ- 37887098605

ಐಎಫ್​ಎಸ್​ಸಿ ಸಂಖ್ಯೆ- SBIN0040277

ಎಂಐಸಿಆರ್​ ಸಂಖ್ಯೆ- 56002419

ಬ್ಯಾಂಕ್​- ಎಚ್​ಡಿಎಫ್​ಸಿ

ಬ್ರಾಂಚ್- ಶೇಷಾದ್ರಿಪುರಂ, ಬೆಂಗಳೂರು

ಖಾತೆ ಸಂಖ್ಯೆ- 50100309178784

ಐಎಫ್​ಎಸ್​ಸಿ ಸಂಖ್ಯೆ- HDFC0000367

ಎಂಐಸಿಆರ್​ ಸಂಖ್ಯೆ- 560240018

ಇದಲ್ಲದೆ, https://cmrf.karnataka.gov.in ವೆಬ್ ಸೈಟ್ ಮೂಲಕ ಹಾಗೂ ಭೀಮ್, ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೊದಲಾದ ಯುಪಿಐ ಆಪ್ ಗಳ ಮೂಲಕವೂ ಹಣ ವರ್ಗಾಯಿಸಬಹುದು.

Comments are closed.