ರಾಷ್ಟ್ರೀಯ

ಸೊಸೆ ಹಾಗೂ 3 ತಿಂಗಳ ಹೆಣ್ಣು ಮಗುವನ್ನು ಜೀವಂತ ಸುಟ್ಟು ಹಾಕಿದ ಅತ್ತೆ-ಮಾವ

Pinterest LinkedIn Tumblr


ಉತ್ತರಪ್ರದೇಶ: ವರದಕ್ಷಿಣೆ ಕಿರುಕುಳದಲ್ಲಿ ಸೊಸೆ ಹಾಗೂ ಆಕೆಯ ಮೂರು ತಿಂಗಳ ಮಗುವನ್ನು ಅತ್ತೆ, ಮಾವ ಸೇರಿ ಜೀವಂತವಾಗಿ ಸುಟ್ಟು ಹಾಕಿರುವ ದಾರುಣ ಘಟನೆ ಉತ್ತರಪ್ರದೇಶದ ರಾಂಪುರ್ ನ ಹಾಜಿಪುರಾ ಮೊಹಲ್ಲಾದಲ್ಲಿ ನಡೆದಿದೆ.

ತನ್ನ ತಂಗಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದು, ಆಕೆಗೆ ಮೂರು ವರ್ಷದ ಮಗ ಹಾಗೂ 3 ತಿಂಗಳ ಹೆಣ್ಣು ಮಗು ಇದೆ. ಏತನ್ಮಧ್ಯೆ ವರದಕ್ಷಿಣೆ ತರಲೇಬೇಕೆಂದು ಹಠ ಹಿಡಿದ ನಂತರ ಆಕೆ ತಂದೆ ಮನೆಗೆ ಬಂದಿದ್ದಳು. ಬುಧವಾರ ಮಾವ ಕರೆ ಮಾಡಿ ಮನೆಗೆ ಕರೆಯಿಸಿಕೊಂಡು ತಾಯಿ ಮತ್ತು ಮಗುವನ್ನು ಜೀವಂತವಾಗಿ ಸುಟ್ಟು ಹಾಕಿರುವುದಾಗಿ ಸಂತ್ರಸ್ತೆಯ ಸಹೋದರ ಮೊಹಮ್ಮದ್ ಜಾವೇದ್ ಆರೋಪಿಸಿದ್ದಾರೆ.

ಘಟನೆ ನಡೆದ ಮೇಲೆ ತಮಗೆ ಮನೆಯವರು ಯಾರು ತಮಗೆ ಮಾಹಿತಿ ನೀಡಿರಲಿಲ್ಲ. ತಾಯಿ ಮತ್ತು ಮಗುವನ್ನು ಸುಟ್ಟು ಹಾಕಿರುವ ವಿಷಯವನ್ನು ನೆರೆಮನೆಯವರು ತಿಳಿಸಿರುವುದಾಗಿ ಜಾವೇದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಜಾವೇದ್ ಹೇಳಿಕೆಯನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಶರ್ಮಾ ತಿಳಿಸಿದ್ದಾರೆ.

Comments are closed.