ಕರ್ನಾಟಕ

ಮೀನು ತಿನ್ನುವುದರಿಂದ ಮಿದುಳಿನ ಬೆಳವಣಿಗೆಯಾಗಿ ಸ್ಮರಣಶಕ್ತಿ ವೃದ್ಧಿಗೆ ಸಹಕಾರಿ

Pinterest LinkedIn Tumblr


ಮೀನು ಮಾಂಸಹಾರಿಗಳಿಗೆ ತುಂಬಾ ಪ್ರಿಯ ಆಹಾರ ಅದರಲ್ಲೂ ಕರಾವಳಿ ತೀರದವರಿಗೆ ಅಂತೂ ಮೀನು ಪಂಚಪ್ರಾಣ. ಮೀನು ತುಂಬಾ ಆರೋಗ್ಯಕರ ಆಹಾರ. ಮೀನಿನಲ್ಲಿ ವಿಟಮಿನ್ ಎ, ವಿಟಮಿನ್ ಡಿ, ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣಾಂಶ, ಮೆಗ್ನಿಶಿಯಂ ಹಾಗೂ ಪೊಟಾಶಿಯಂನಂತಹ ಖನಿಜಾಂಶಗಳಿರುತ್ತದೆ.

ಆರೋಗ್ಯಕ್ಕೆ ಮೀನು ರಾಮಬಾಣ
ಮೀನಿನಲ್ಲಿ ಇರುವ ಒಮೆಗಾ 3 ಕೊಬ್ಬಿನಾಮ್ಲವು ಕಣ್ಣಿನ ದೃಷ್ಟಿ ಮತ್ತು ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮೀನಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದ್ದು ದೇಹಕ್ಕೆ ಬೇಕಾಗುವ ಪೋಷಕಾಂಶಗಳಲ್ಲಿ ಒಂದಾಗಿದೆ. ಮೂಳೆಗಳ ಆರೋಗ್ಯ ಮತ್ತು ಬೆಳವಣಿಗೆಗೆ ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಆತೀ ಅಗತ್ಯ.

ಮೀನು ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮಧುವೇಹ ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಮೀನಿನ ಎಣ್ಣೆ ಉಪಯೋಗಿಸುವುದರಿಂದ ರಕ್ತದೊತ್ತಡವನ್ನು ತಡೆಗಟ್ಟುತ್ತದೆ. ಮೀನಿನಲ್ಲಿ ಇರುವ ಒಮೆಗಾ 3 ಅಂಶ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೀನು ಸೇವನೆಯಿಂದ ಅಸ್ತಮಾ ದೂರ ಮಾಡಬಹುದು.

ಮೀನುಗಳ ಸೇವನೆಯಿಂದ ಮಿದುಳಿನ ಬೆಳವಣಿಗೆಯಾಗಿ ಸ್ಮರಣಶಕ್ತಿ ವೃದ್ಧಿಗೆ ಇದು ಸಹಕಾರಿ.

ಮೀನಿನ ಕರಿ
ಊಟ ಎಲ್ಲರಿಗೂ ಬೇಕೇ ಬೇಕು. ಕೆಲವರಿಗೆ ಉಪ್ಪಿನ ಕಾಯಿ ಇಲ್ಲದೇ ಊಟ ಸೇರಲ್ಲ. ಇನ್ನು ಕೆಲವರಿಗೆ ಮೀನಿಲ್ಲದೆ ಊಟ ಸೇರುವುದಿಲ್ಲ. ಮೀನಿನ ಖಾದ್ಯ ತಯಾರಿಸುವಲ್ಲಿ ಕರಾವಳಿ ಭಾಗದ ಜನರೇ ನಿಸ್ಸೀಮರು.

ಮೀನಿನ ಕರಿಯನ್ನು ಮಣ್ಣಿನ ಪಾತ್ರೆಯಲ್ಲಿ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ರುಚಿಯಾಗಿರುತ್ತದೆ. ನೀವು ಮನೆಯಲ್ಲೇ ಸಿದ್ಧ ಪಡಿಸಿ ಮಾಂಸಹಾರಿಗಳೂ ಇಷ್ಟಪಡುವ ಮತ್ತು ಆರೋಗ್ಯಕಾರಕ ಮೀನಿನ ಕರಿಯನ್ನು ನೀವೂ ಒಮ್ಮೆ ಸವಿದು ನೋಡಿ.

ಬೇಕಾಗುವ ಸಾಮಾಗ್ರಿಗಳು
ಬೂತಾಯಿ(ಬೈಗೆ) ಮೀನು 20
ಈರುಳ್ಳಿ 5 ರಿಂದ 6
ಕೊತ್ತಂಬರಿ ಬೀಜ 4 ಚಮಚ
ಅರಿಶಿನ ಪುಡಿ 1/4 ಟೀ.ಚಮಚ
ಬೆಳ್ಳುಳ್ಳಿ 1
ಸಾಸಿವೆ 1 ಚಮಚ
ನಿಂಬೆ ಗಾತ್ರದಷ್ಟು ಹುಣಸೇ ಹುಳಿ
ಹಸಿಮೆಣಸಿನ ಕಾಯಿ 10
ಒಣಮೆಣಸು 15
ಶುಂಠಿ ಸ್ವಲ್ಪ
ತೆಂಗಿನ ತುರಿ 1 ಬಟ್ಟಲು
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 4 ಚಮಚ

ತಯಾರಿಸುವ ವಿಧಾನಗಳು
ಮೀನುಗಳನ್ನು ಚೆನ್ನಾಗಿ ತೊಳೆದು ತುಂಡುಗಳನ್ನಾಗಿ ಮಾಡಿಕೊಳ್ಳಿ. ನಂತರ ಒಣಮೆಣಸಿನ ಕಾಯಿ, ಕೊತ್ತಂಬರಿ ಬೀಜ, ಬೆಳ್ಳುಳ್ಳಿ, ತೆಂಗಿನ ತುರಿ, ಸಾಸಿವೆ, ಅರಿಶಿನ ಪುಡಿ, ಶುಂಠಿಯನ್ನು ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಹುಣಸೇ ಹುಳಿಯನ್ನು ಬಿಸಿ ನೀರಿನಲ್ಲಿ ನೆನೆಸಿ ಕಿವುಚಿ ರಸ ತೆಗೆದುಕೊಳ್ಳಿ.ನಂತರ ಹಸಿ ಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ಎಣ್ಣೆ ಕಾಯಿಸಿ ಅದರಲ್ಲಿ ಹಾಕಿ ಬಾಡಿಸಿ. ಇದಕ್ಕೆ ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ ಇನ್ನಷ್ಟು ಹುರಿಯಿರಿ. ನಂತರ ಹುಣಸೆ ರಸ, ಉಪ್ಪು ಮತ್ತು ನೀರು ಬೆರೆಸಿ ಚೆನ್ನಾಗಿ ಕುದಿಸಿ.ನಂತರ ಇದಕ್ಕೆ ಮೀನಿನ ತುಂಡುಗಳನ್ನು ಹಾಕಿ ಚೆನ್ನಾಗಿ ಬೇಯಿಸಿದರೆ ಬಿಸಿ ಬಿಸಿ ಮೀನಿನ ಕರಿ ರೆಡಿ…

Comments are closed.