ಕರ್ನಾಟಕ

ಬಿಪಿಎಲ್‌ ಕಾರ್ಡ್‌ದಾರರಿಗೆ ಸಿಹಿಸುದ್ದಿ

Pinterest LinkedIn Tumblr


ಬೆಂಗಳೂರು: ಬಿಪಿಎಲ್ ಕಾರ್ಡುದಾರರಿಗೆ ಪಡಿತರ ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಇನ್ಮುಂದೆ ಪಡಿತರವನ್ನು ‘ಪುಡ್ ಬಾಸ್ಕೆಟ್’ನಲ್ಲಿ ನೀಡುವ ಯೋಜನೆಗೆ ಸಿದ್ಧತೆ ನಡೆಸಿದೆ.

ಅನ್ನ ಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಪಡಿತರದ ತೂಕ ಮತ್ತು ಗುಣಮಟ್ಟದಲ್ಲಿ ಅಕ್ರಮವನ್ನು ತಡೆಯುವ ಉದ್ದೇಶದಿಂದ ರಾಜ್ಯ ಆಹಾರ ಇಲಾಖೆ ನೂತನ ಯೋಜನೆಗೆ ಸಿದ್ಧತೆ ನಡೆಸಿದ್ದು, ಇದರನ್ವಯ ಗ್ರಾಹಕರಿಗೆ 5 ಕೆ.ಜಿ. ಅಕ್ಕಿ, ಜತೆಗೆ ತಲಾ ಒಂದು ಕೆಜಿ ತೊಗರಿ ಬೆಲೆ, ಸಕ್ಕರೆ, ಉಪ್ಪು ಮತ್ತು ಎಣ್ಣೆಯನ್ನು ಪ್ರತ್ಯೇಕವಾಗಿ ಪ್ಯಾಕಿಂಗ್ ಮಾಡಿ ಆಹಾರ ಬುಟ್ಟಿಗಳಲ್ಲಿ ಬಿಪಿಎಲ್ ಕಾರ್ಡುದಾರರಿಗೆ ವಿತರಿಸಲಾಗುವುದು.

ಈ ರೀತಿ ಆಹಾರ ಬುಟ್ಟಿಯಲ್ಲಿ ದಿನಸಿ ಪ್ಯಾಕಿಂಗ್ ಮಾಡಲು ರಾಜ್ಯಸರ್ಕಾರ ಟೆಂಡರ್ ಕರೆಯಲಿದ್ದು, ಇವರು ದಿನಸಿ ಪ್ಯಾಕಿಂಗ್ ಮಾಡಿ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲಿದ್ದಾರೆ. ಈ ಮೂಲಕ ಪಡಿತರದ ಗುಣಮಟ್ಟ ಕಾಯ್ದುಕೊಂಡು, ಅಕ್ರಮ ಮಾರಾಟವನ್ನು ತಡೆಯಲು ಆಹಾರ ಇಲಾಖೆ ನಿರ್ಧರಿಸಿದೆ.

ಈಗಾಗಲೇ ಈ ಯೋಜನೆ ಆಂಧ್ರಪ್ರದೇಶದಲ್ಲಿ ಜಾರಿಯಲ್ಲಿದ್ದು, ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಹೊರತುಪಡಿಸಿ ಉಳಿದ ಪದಾರ್ಥಗಳನ್ನು ಮಾರುಕಟ್ಟೆ ಬೆಲೆಗಿಂತ ಶೇ.50 ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

Comments are closed.