ಕರಾವಳಿ

ಕೊಲ್ಲೂರು ಅಭಯಾರಣ್ಯದಲ್ಲಿ ಕಂಡ ಟೆಂಟಿಗೂ ನಕ್ಸಲೇಟಿಗೂ ಸಂಬಂಧ ಇಲ್ಲ: ಪೊಲೀಸ್ ಸ್ಪಷ್ಟನೆ

Pinterest LinkedIn Tumblr

ಉಡುಪಿ: ಕೊಲ್ಲೂರು ಸಮೀಪ ದಳಿ ಹಾಗೂ ಅರಿಶಿನ ಗುಂಡಿ ಫಾಲ್ಸ್ ಅಭಯಾರಣ್ಯದಲ್ಲಿ ಪತ್ತೆಯಾದ ಟೆಂಟಿಗೂ ನಕ್ಸಲೈಟಿಗೂ ಯಾವುದೇ ಸಂದಂಭ ಇಲ್ಲ. ಯಾರೋ ವಿರಕ್ತರು ದ್ಯಾನ ನಿಮಿತ್ತ ಮಾಡಿಕೊಂಡ ವ್ಯವಸ್ಥೆ ಎಂದು ನೈಕ್ಸಲೈಟ್ ವಿರೋಧ ಪಡೆ ಸ್ಪಷ್ಟ ಪಡಿಸಿದೆ.

ಕಾಡಿಗೆ ಹೋದ ಸ್ಥಳಿಯರಿಗೆ ಸೋಮವಾರ ಅಭಯಾರಣ್ಯದಲ್ಲಿ ಟೆಂಟ್ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಗಮನಕ್ಕೆ ತರಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ಎ‌ಎನ್‌ಎಸ್ ಪಡೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಎ‌ಎನ್‌ಎಸ್ ದಳ ಆಗಮಿಸಿ ಪರಿಶೀಲನೆ ನಡೆಸಿ, ಸಿಕ್ಕಿದ ವಸ್ತು ಹಾಗೂ ಬಟ್ಟೆಗಳಿಂದ ಯಾರೋ ಧ್ಯಾನಕ್ಕಾಗಿ ಮಾಡಿಕೊಂಡ ವ್ಯವಸ್ಥೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಪತ್ತೆಯಾದ ಟೆಂಟ್ ನಕ್ಸಲೈಟ್ ಇರಬಹುದು ಎಂಬ ಶಂಕ ಸಧ್ಯಕ್ಕೆ ದೂರಾವಾಗಿದೆ.

ಟೆಂಟ್ ಒಳಗೆ ಒಲೆ ಉರಿಸುವ ಪ್ರಯತ್ನ ನಡೆದಿದ್ದು, ಅಕ್ಕಿ ಹಾಗೂ ಬನ್ ಸಿಕ್ಕದೆ. ರಾತ್ರಿ ವಿಶ್ರಾತಿಗೆ ಚಪ್ಪಟೆ ಕಲ್ಲುಗಳ ಸಾಲಾಗಿ ಜೋಡಿಸಿಡಲಾಗಿದೆ. ಒಲೆ ಉರಿಸಲು ಸೌಧೆ ಕೂಡಾ ಟೆಂಟ್ ಬಳಿ ತಂದು ಹಾಕಲಾಗಿದೆ. ಸನ್ಯಾಸಿಗಳು ಹಾಕಿಕೊಳ್ಳುವ ಬಿಳಿ ಜುಬ್ಬ, ಹಾಗೂ ಮುಂಡು ಬಿಳಿ ಪಂಚೆ ಯಾರೋ ದ್ಯಾನದ ಹಿನ್ನೆಲೆಯಲ್ಲಿ ಬಂದಿದ್ದು, ಮಳೆಗೆ ಹಿಂದಿರುಗಿರಬೇಕು. ಮತ್ತೆ ಬರುವ ಸಾಧ್ಯತೆ ಇಲ್ಲ ಎನ್ನಲಾಗದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಅರಿಶಿನ ಗುಂಡಿ ಹಾಗೂ ದಳಿ ನಡುವೆ ಟೆಂಟ್ ಇರುವ ಬಗ್ಗೆ ಅರಣ್ಯಕ್ಕೆ ಹೋದವರು ಮಾಹಿತಿ ನೀಡಿದ್ದು, ನಾವು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ನಕ್ಸಲೈಟ್ ವಿರೋಧಿ ಪಡೆ ಗಮನಕ್ಕೆ ತಂದಿದ್ದರು. ಎ‌ಎನ್‌ಎಫ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದು, ನಕ್ಲಸಲೈಟಿಗೂ ಟೆಂಗೂ ಸಂಬಂಧ ಇಲ್ಲ ಎಂದು ದೃಢ ಪಡಿಸಿದೆ. ಯಾರೋ ಧ್ಯಾನಕ್ಕೆ ತಾತ್ಕಾಲಿಕ ಟೆಂಟ್ ಹಾಕಿಕೊಂಡಿದ್ದು, ಮಳೆ ಜೋರಿಗೆ ಹಿಂದಿರುಗಿರುವ ಸಾಧ್ಯತೆ ಇದ್ದು, ಮತ್ತೆ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
– ರಾಘವೇಂದ್ರ ನಾಯ್ಕ್, ಆರ್‌ಎಫ್‌ಒ, ಕೊಲ್ಲೂರು.

ಕೊಲ್ಲೂರು ಅಭಯಾರಣ್ಯದಲ್ಲಿ ಕಾಣಿಸಿದ ಟೆಂಟಿಗೂ ನಕ್ಸಲೈಟಿಗೂ ಯಾವುದೇ ಸಂಬಂಧವಿಲ್ಲ ಎಂದು ಎ‌ಎನ್‌ಎಫ್ ಸ್ಪಷ್ಟ ಪಡಿಸಿದೆ. ಯಾರೋ ಕೊಲ್ಲೂರಿಗೆ ಬಂದ ವಿರಕ್ತಿ ಧ್ಯಾನಕ್ಕೆ ಮಾಡಿಕೊಂಡ ವ್ಯವಸ್ಥೆ ಎಂತೆ ಭಾಸವಾಗುತ್ತದೆ. ಟೆಂಟ್‌ನಲ್ಲಿ ಸಿಕ್ಕ ಬಿಳಿ ಜುಬ್ಬ ಹಾಗೂ ಬಿಳಿ ಪಂಚೆ ಇದಕ್ಕೆ ಇಂಬು ಕೊಡುತ್ತದೆ.
– ಹರಿರಾಮ್ ಶಂಕರ್, ಎ‌ಎಸ್ಪಿ, ಕುಂದಾಪುರ.

Comments are closed.