ಕರ್ನಾಟಕ

ನಿಮ್ಮ ಮನೆಯಲ್ಲಿ ಜಿರಳೆ ಇದ್ದರೆ ಈ ಮಾರಕ ಕಾಯಿಲೆ…!!

Pinterest LinkedIn Tumblr


ಸಾಮಾನ್ಯವಾಗಿ ಅಸ್ತಮಾ ಹೊಂದಿರುವ ಜನರು ಕೆಮ್ಮು ,ಎದೆ ಬಿಗಿತ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಾರೆ. ಇದಕ್ಕೆ ಕಾರಣ ಧೂಳು, ಗಾಳಿ, ಧೂಮಪಾನ ಹಾಗೂ ವಾತಾವರಣದಲ್ಲಾಗುವ ಬದಲಾವಣೆಗಳಿಂದಾಗಿ ಈ ಸಮಸ್ಯೆಗಳು ಹೆಚ್ಚಾಗಬಹುದು. ಅಷ್ಟಲ್ಲದೆ ಮಳೆಗಾಲ, ಚಳಿಗಾಲ ಹತ್ತಿರ ಬರುತ್ತಿದ್ದಂತೆ ಸಾಮಾನ್ಯವಾಗಿ ಅಸ್ತಮಾ ರೋಗದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಅಸ್ತಮಾ ಹೊಂದಿರುವವರು ಯಾವಾಗಲೂ ಇನ್​ಹಾಲರ್ (Inhaler) ಸದಾ ಕೈಯಲ್ಲಿಟ್ಟುಕೊಂಡಿರುತ್ತಾರೆ. ಜೊತೆಗೆ ಈ ವಿಚಾರವಾಗಿ ಹೆಚ್ಚು ಎಚ್ಚರಿಕೆ ವಹಿಸಬೇಕು ಇಲ್ಲವಾದಲ್ಲಿ ತೊಂದರೆಯಾಗಬಹುದು. ಇತ್ತೀಚೆಗೆ ಈ ಅಂಶಗಳ ಜೊತೆಗೆ ಮತ್ತೊಂದು ವಿಚಾರ ಹೊರಬಂದಿದೆ ಅದು ಏನಪ್ಪಾ ಅಂದರೆ ಜಿರಳೆಯಿಂದಲೂ ಅಸ್ತಮಾ ಬರುತ್ತದೆ. ಎಂದು ಹೇಳಲಾಗಿದೆ.

ಹೌದು ಸಾಮಾನ್ಯವಾಗಿ ಧೂಮಪಾನ ಮಾಡುವವರಿಗೆ ಅಸ್ತಮಾ ಬರುವ ಸಾಧ್ಯತೆ ಅತೀ ಹೆಚ್ಚು. ಪ್ರತಿದಿನ ಹಾಗೂ ಕೆಲವೊಮ್ಮೆ ಧೂಮಪಾನ ಮಾಡುವವರಲ್ಲಿ ಕೆಮ್ಮು ಕಾಣಿಸಿಕೊಳ್ಳುತ್ತದೆ. ಇದರಿಂದ ಅವರಿಗೆ ಮುಂದೆ ಅಸ್ತಮಾ ಸಮಸ್ಯೆ ಆವರಿಸಿಕೊಳ್ಳಬಹುದು. ಧೂಳಿನ ಕಣಗಳು, ತಂಪಾದ ಗಾಳಿ, ಹವಾಮಾನ ಬದಲಾವಣೆ, ಹೊಗೆ ಕೂಡ ಅಸ್ತಮಾ ರೋಗವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಲ್ಲದೆ ವಾಯುಮಾಲಿನ್ಯದಿಂದ ಅಂದರೆ ವಾಹನಗಳಿಂದ ಬರುವ ಹೊಗೆ ಕೂಡ ಆಸ್ತಮಾವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಎಂಬುದು ತಿಳಿದಿರುವ ವಿಚಾರವೇ.

ಸದ್ಯ ಇದೀಗ ಮನೆಯಲ್ಲಿ ಜಿರಳೆಗಳು ಹೆಚ್ಚಾಗಿದ್ದರೆ ಸುತ್ತ ಮುತ್ತ ಜಿರಳೆಗಳ ಓಡಾಟದಿಂದ ಅಸ್ತಮಾದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಅದರಲ್ಲೂ ಸಣ್ಣ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಅಸ್ತಮಾದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಕೂಡ ಹೇಳಲಾಗುತ್ತಿದೆ.

ಜೊತೆಗೆ ಅಸ್ತಮಾದಿಂದ ಬಳಲುತ್ತಿರುವ ಕಠಿಣ ವ್ಯಾಯಾಮ ಮಾಡುವುದರಿಂದ ಅಸ್ತಮಾ ರೋಗಿಗಳ ಉಸಿರಾಟದ ಪ್ರದೇಶವನ್ನು ಕಿರಿದಾಗಿಸಬಹುದು. ಹೀಗಾಗಿ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಕಠಿಣ ವ್ಯಾಯಾಮದಿಂದ ದೂರವಿರುವುದು ಕೂಡ ಉತ್ತಮ.

Comments are closed.